Bengaluru CityDistrictsKarnatakaLatestMain Post

ಸಿಡಿ ಕೇಸ್‍ಗೆ ಟ್ವಿಸ್ಟ್ – 5 ಕೋಟಿ ರೂ. ಸಂದಾಯ ಮಾಡಿದ್ರಾ ರಮೇಶ್ ಜಾರಕಿಹೊಳಿ?

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ನಿನ್ನೆ 2 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆಯ ವೇಲೆ ಮಾಜಿ ಸಚಿವರು ಎಸ್‍ಐಟಿ ಪೊಲೀಸರ ಎದುರು 4 ಪುಟಗಳ ಹೇಳಿಕೆ ದಾಖಲಿಸಿದ್ದಾರೆ. ಎಸಿಪಿ ಧರ್ಮೆಂದ್ರ ಎದುರು ಜಾರಕಿಹೊಳಿ ಹೇಳಿಕೆ ನೀಡಿದ್ದು, ರಾಜಕೀಯ ಷಡ್ಯಂತ್ರ, ಬ್ಲ್ಯಾಕ್‍ಮೇಲ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ನನ್ನ ವಿರುದ್ಧ 4 ತಿಂಗಳಿಂದ ಬ್ಲ್ಯಾಕ್‍ಮೇಲ್ ನಡೆಯುತ್ತಿತ್ತು. ನಿನ್ನನ್ನ ರಾಜಕೀಯವಾಗಿ ಮುಗಿಸ್ತೀವಿ ಎಂದು ಧಮ್ಕಿ ಹಾಕಿದ್ದರು. ನನ್ನ ಆಪ್ತ ನಾಗರಾಜ್ ಮೂಲಕ ಹಣಕ್ಕಾಗಿ ನನ್ನ ಮೇಲೆ ಒತ್ತಡ ಹಾಕಿದ್ದರು. ಆದರೆ ನಾನು ಆ ಒತ್ತಡಕ್ಕೆ ಮಣಿದಿರಲಿಲ್ಲ ಎಂದು ಹೇಳುವ ಮೂಲಕ 4 ತಿಂಗಳಿಂದ ನಡೆಯುತ್ತಿದ್ದ ಷಡ್ಯಂತ್ರದ ಬಗ್ಗೆ ಎಸ್‍ಐಟಿಗೆ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ಹಣ ನೀಡಿದ್ರಾ?
ಸಿಡಿ ಕೇಸ್ ಸಂಬಂಧ ರಮೇಶ್ ಜಾರಕಿಹೊಳಿಯವರು 5 ಕೋಟಿ ರೂ. ಸಂದಾಯ ಮಾಡಿದ್ರಾ ಎನ್ನುವ ಪ್ರಶ್ನೆಯೊಂದು ಮೂಡಿದೆ. ಸಿಡಿ ತೋರಿಸಿದಾಗ ಮಾಜಿ ಸಚಿವರು 5 ಕೋಟಿ ರೂಪಾಯಿ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಶಾಸಕರ ಮೂಲಕ ರಮೇಶ್ ಜಾರಕಿಹೊಳಿಯವರು ಹಂತ-ಹಂತವಾಗಿ ಹಣ ಸಂದಾಯ ಮಾಡಿದ್ದಾರೆ. ಆದರೆ ಸಿಡಿಕೋರರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದದ್ದರು. ಇನ್ನಷ್ಟು ಹಣ ನೀಡಲು ಮಾಜಿ ಸಚಿವರು ಹಿಂದೇಟು ಹಾಕಿದ್ದರಿಂದ ಗ್ಯಾಂಗ್ ಸಿಡಿ ಬಿಡುಗಡೆ ನಿರ್ಧರಿಸಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published.

Back to top button