ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೊದಲು ಬ್ಯಾಟಿಂಗ್ನಲ್ಲಿ ಭಾರತದ ಯುವ ಆಟಗಾರ ಸೂರ್ಯಕಮಾರ್ ತನ್ನ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನ ಮೊದಲ ಅರ್ಧಶತಕವನ್ನು ಭರ್ಜರಿಯಾಗಿ ಸಿಡಿಸಿ ಸಂಭ್ರಮಾಚರಿಸಿಕೊಂಡರು.
Advertisement
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಟಿ20 ಪಂದ್ಯದ ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ಬೌಲರ್ ಗಳು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ರನ್(12 ಬಾಲ್ 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಂತೆ 3ನೇ ಓವರ್ನಲ್ಲಿ ದಾಳಿಗಿಳಿದ ಜೊಫ್ರಾ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
Advertisement
M.O.O.D!????????
An 8⃣-run win in the 4th @Paytm #INDvENG T20I & #TeamIndia level the series 2-2! ????????@Paytm #INDvENG
Scorecard ???? https://t.co/TYCBHIV89r pic.twitter.com/XGUimbNa6c
— BCCI (@BCCI) March 18, 2021
Advertisement
ಕೆ.ಎಲ್ ರಾಹುಲ್ ಒಂದು ಬೌಂಡರಿ ಸಿಡಿಸಿ ಆರ್ಭಟಿಸುವ ಲಕ್ಷಣ ತೋರಿದರು ಕೂಡ ಅವರ ಆಟ 14 ರನ್ (17 ಬಾಲ್, 2 ಬೌಂಡರಿ)ಗೆ ಅಂತ್ಯವಾಯಿತು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ 1 ರನ್ ಗೆ ಸುಸ್ತಾದರು. ಈ ವೇಳೆ ಒಂದಾದ ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ 4ನೇ ವಿಕೆಟ್ಗೆ 48 ರನ್(28 ಬಾಲ್) ಸಿಡಿಸಿ ತಂಡಕ್ಕೆ ಚೇತರಿಕೆಯ ಜೊತೆಯಾಟವಾಡಿದರು. ಪಂತ್ 30 ರನ್(23 ಬಾಲ್, 4 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೊಂದು ಕಡೆಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ 57 ರನ್(31 ಬಾಲ್, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ತಮ್ಮ ಟಿ20 ಕ್ರಿಕೆಟ್ನ ಮೊದಲ ಅರ್ಧಶತಕ ಬಾರಿಸಿ ಸಂಭ್ರಮ ಆಚರಿಸಿಕೊಂಡರು.
Advertisement
ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 37( 18 ಎಸೆತ, 5 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟ್ ಆದರು ಅಂತಿಮವಾಗಿ ಭಾರತ ತಂಡ 20 ಒವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಕಳೆಹಾಕಿತು.
ಗೆಲುವಿಗೆ 186 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್, 9ರನ್(6 ಎಸೆತ, 1 ಸಿಕ್ಸರ್) ಹೊಡದು ಆಡುತ್ತಿದ್ದ ಜೋಸ್ ಬಟ್ಲರ್ ವಿಕೆಟ್ ಪಡೆದರು. ನಂತರ ಬಂದ ಡೇವಿಡ್ ಮಲಾನ್ 14 ರನ್( 17 ಎಸೆತ, 1 ಸಿಕ್ಸರ್)ಗೆ ವಿಕೆಟ್ ಒಪ್ಪಿಸಿದರು. ನಂತರ ಉತ್ತಮವಾಗಿ ಬ್ಯಾಟ್ಬೀಸುತ್ತಿದ್ದ ಜೇಸನ್ ರಾಯ್ 40 ರನ್(27 ಎಸೆತ,6 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತ ಬೌಲರ್ಗಳಿಗೆ ಕಾಡಿದರು. ಬಳಿಕ ಬೆನ್ ಸ್ಟೋಕ್ 46 ರನ್ (23 ಎಸೆತ,4 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟ್ ಆದರು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಜೋಫ್ರಾ ಆರ್ಚರ್ 18 ರನ್( 8 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿದರು ಕೂಡ ಅಂತಿಮವಾಗಿ ನಿಗದಿತ ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 8 ರನ್ಗಳ ಅಂತರದಲ್ಲಿ ಸೋಲುಂಡಿದೆ. ಭಾರತ 8 ರನ್ಗಳ ರೋಚಕ ಗೆಲುವಿನೊಂದಿಗೆ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ ಮುಂದಿನ ಕೊನೆಯ ಪಂದ್ಯ ಶನಿವಾರ ನಡೆಯಲಿದ್ದು, ಫೈನಲ್ ಹಣಾಹಣಿಯಂತಾಗಿದೆ.