ಬೆಂಗಳೂರು: ಸಿಎಂ ಆದಿಯಾಗಿ ಬಿಜೆಪಿಯ ಪ್ರಮುಖರು ಶಿಸ್ತು ಕ್ರಮದ ಸುಳಿವು ಕೊಟ್ಟಿದ್ರೂ, ಎಂಎಲ್ಸಿ ಹೆಚ್ ವಿಶ್ವನಾಥ್ ಬೇಗುದಿ ಮಾತ್ರ ಕಮ್ಮಿ ಆಗ್ತಿಲ್ಲ. ವಿಶ್ವನಾಥ್ಗೆ ವಿಧಾನಪರಿಷತ್ ಸದಸ್ಯತ್ವವನ್ನು ಭಿಕ್ಷೆಯ ರೀತಿ ನೀಡಲಾಗಿದೆ ಎಂಬ ನಿಗಮ ಮಂಡಳಿ ಅಧ್ಯಕ್ಷರ ಪ್ರಕಟಣೆಗೆ ಹಳ್ಳಿಹಕ್ಕಿ ಫುಲ್ ಗರಂ ಆಗಿದ್ದಾರೆ.
ನನಗೆ ಎಂಎಲ್ಸಿ ಸ್ಥಾನವನ್ನು ಅವರಪ್ಪನ ಮನೆಯಿಂದ ಕೊಟ್ಟಿದ್ದಾರಾ? ನನ್ನ ತ್ಯಾಗದಿಂದ ನನಗೆ ಪರಿಷತ್ ಸ್ಥಾನಮಾನ ಸಿಕ್ಕಿದೆ. ನಾವು ಅವರ ಮರ್ಜಿಯಲ್ಲಿಲ್ಲ, ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರವೇ ನಮ್ಮ ಮರ್ಜಿಯಲ್ಲಿದೆ ಎಂದು ವಿಶ್ವನಾಥ್ ಗುಡುಗಿದ್ದಾರೆ.
Advertisement
Advertisement
ಯಾರೇ ಮಂತ್ರಿಯಾಗಿರಬಹುದು. ಅದೆಲ್ಲವೂ ನಮ್ಮ ತ್ಯಾಗದಿಂದ ಆಗಿರುವುದು. ನಮ್ಮ ಬಗ್ಗೆ ಮಾತಾಡಲು ಅವರಿಗೆ ಯಾವ ಅಧಿಕಾರ ಇದೆ ಅಂತಾ ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ವಿಶ್ವನಾಥ್ ವಿರುದ್ಧ ಸಚಿವ ಬಿಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ವಿಶ್ವನಾಥ್ ಹತಾಶರಾಗಿ ಆಧಾರ ರಹಿತ ಆರೋಪ ಮಾಡ್ತಿರೋದು ಸರಿಯಲ್ಲ. ಒಂದು ಪಕ್ಷದ ಎಂಎಲ್ಸಿಯಾಗಿ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು ಅಂತಾ ಕಿವಿಮಾತು ಹೇಳಿದ್ದಾರೆ. ಈ ಮಧ್ಯೆ, ವಿಶ್ವನಾಥ್ ಹೇಳಿಕೆಯನ್ನೇ ಕಾಂಗ್ರೆಸ್ ಅಸ್ತ್ರ ಮಾಡ್ಕೊಂಡಿದೆ. ಇದು 10 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಸಿದ್ದರಾಮಯ್ಯ ಆಪಾದಿಸಿದ್ದಾರೆ.
Advertisement
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ನೀರಾವರಿ ಇಲಾಖೆಯ ಟೆಂಡರ್ ಬಗ್ಗೆ ನನಗೂ ಮಾಹಿತಿ ಇದೆ. ಅಸೆಂಬ್ಲಿಯಲ್ಲಿ ಮಾತಾಡೋಣ ಅಂದ್ಕೊಂಡಿದ್ದೆ. ಆದರೆ ಅದಕ್ಕೂ ಮುನ್ನ ವಿಶ್ವನಾಥ್ ಮಾತಾಡಿದ್ರು. ಇದರ ತನಿಖೆಗೆ ಜಂಟಿ ಸದನ ಸಮಿತಿ ರಚನೆ ಆಗ್ಬೇಕು ಅಂತಾ ಡಿಕೆಶಿ ಒತ್ತಾಯಿಸಿದ್ರು.