ಸೀಲ್‍ಡೌನ್ ಏರಿಯಾ ಪಕ್ಕದಲ್ಲೇ ವಾರದ ಸಂತೆ – ನಿದ್ದೆಗೆ ಜಾರಿದ ತಾಲೂಕಾಡಳಿತ

ವಿಜಯಪುರ: ಸೀಲ್‍ಡೌನ್ ಪ್ರದೇಶದ ಪಕ್ಕದಲ್ಲಿ ಭರ್ಜರಿ ವಾರದ ಸಂತೆ ನಡೆದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಜಾಮಿಯಾ ಮಸೀದಿ ಬಳಿಯ ನಾಗೂರು ರಸ್ತೆಯಲ್ಲಿ ಭರ್ಜರಿ ಸೋಮವಾರ ಸಂತೆ ನಡೆದಿದೆ. ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಬಳಸದೇ ಸಂತೆಯಲ್ಲಿ ಜನರು ಭರ್ಜರಿ ಖರೀದಿ ನಡೆಸುತ್ತಿದ್ದಾರೆ. ಜಾಮಿಯಾ ನಗರ, ನಾಗೂರು ರಸ್ತೆ, ಮೆಹಬೂಬ್ ಸುಬಾನಿ ದರ್ಗಾ ಬಳಿಯೆ 4 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ನಾಗೂರು ರಸ್ತೆಯಲ್ಲಿ ಸೀಲ್‍ಡೌನ್ ಮಾಡಲಾಗಿದೆ.

- Advertisement -

ಸೀಲ್‍ಡೌನ್ ಏರಿಯಾಗೆ ಹತ್ತಿಕೊಂಡಿರುವ ರಸ್ತೆಯಲ್ಲಿ ಭರ್ಜರಿ ಸಂತೆ ನಡೆದಿದೆ. ಪೇದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಬ.ಬಾಗೇವಾಡಿ ಪೊಲೀಸ್ ಠಾಣೆ ಕೂಡ ಸೀಲ್‍ಡೌನ್ ಆಗಿದೆ. ಇಷ್ಟೆಲ್ಲ ಆದ್ರೂ ಕೂಡ ಸೋಮವಾರ ಸಂತೆ ನಡೆದಿದ್ದು, ತಾಲೂಕಾಡಳಿತ ನಿದ್ರೆಗೆ ಜಾರಿದೆ.

- Advertisement -