ರಾಯಚೂರು: ಸಭೆಯಲ್ಲಿ ಮಾಹಿತಿ ನೀಡಲು ತಡವರಿಸಿದ ರಿಮ್ಸ್ ನಿರ್ದೇಶಕರಿಗೆ ಸಚಿವ ಡಾ.ಸುಧಾಕರ ಸಖತ್ ಕ್ಲಾಸ್ ತೆಗೆದುಕೊಂಡಿದ್ದು, ವೈದ್ಯಕೀಯ ಸಚಿವರ ಕ್ಲಾಸ್ಗೆ ರಿಮ್ಸ್ ನಿರ್ದೇಶಕ ಬಸವರಾಜ್ ಪೀರಾಪುರ ಕಕ್ಕಾಬಿಕ್ಕಿಯಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರಾಯಚೂರು ಜಿಲ್ಲಾ ಕೋವಿಡ್ ಆಸ್ಪತ್ರೆ ಓಪೆಕ್ ಹಾಗೂ ರಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಸಂಬಂಧ ಜನಪ್ರತಿನಿಧಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
Advertisement
Advertisement
ಸಭೆಯಲ್ಲಿ ಸಚಿವರಿಗೆ ರಿಮ್ಸ್ ನಿರ್ದೇಶಕ ಡಾ. ಬಸವರಾಜ್ ಪೀರಾಪುರ ಅವರು ಮಾಹಿತಿ ನೀಡಲು ತಡವರಿಸುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸಚಿವರು ಫಸ್ಟ್ ಟೈಮ್ ಪ್ರೆಸೆಂಟೇಶನ್ ಕೊಡುತ್ತೀರಾ..?, ರಿಮ್ಸ್ ಆಸ್ಪತ್ರೆ ಯಾವಾಗ ಆರಂಭವಾಯ್ತು?, ಎಷ್ಟು ಸಿಬ್ಬಂದಿ ಇದ್ದಾರೆ? ಎಷ್ಟು ಸಿಬ್ಬಂದಿ ಬೇಕಾಗಿದ್ದಾರೆ ಎಂದು ವೈದ್ಯರ ಎದುರೇ ರಿಮ್ಸ್ ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ನಿರ್ದೇಶಕರು ಸಚಿವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದ ಪ್ರಸಂಗ ನಡೆದಿದೆ.