ಬೆಂಗಳೂರು: ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಮಾತುಕತೆ ನಡೆಸಿದೆ. ಸಿದ್ದರಾಮಯ್ಯನವರ ಆಗಮನದ ಹಿನ್ನೆಲೆ ವಿಶೇಷ ಬೋಜನಕೂಟ ಸಹ ಆಯೋಜಿಸಲಾಗಿತ್ತು.
Advertisement
ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯನವರು, ಗೃಹಪ್ರವೇಶಕ್ಕೆ ಬರಲು ಆಗಿರಲಿಲ್ಲ. ನಿವಾಸಕ್ಕೆ ಬನ್ನಿ ಎಂದು ಜಮೀರ್ ಪದೇ ಪದೇ ಕರೆಯುತ್ತಿದ್ದರು. ನಿನ್ನೆ ಸಹ ಔತಣಕೂಟಕ್ಕೆ ಆಹ್ವಾನ ನೀಡಿದ್ದರಿಂದ ಇಂದು ಬಂದು ಊಟ ಮಾಡಿದ್ದೇನೆ. ಇದೊಂದು ಖಾಸಗಿ ಭೇಟಿಯಾಗಿದ್ದು, ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆದಿಲ್ಲ. ಜಾರಿನಿರ್ದೇಶನಾಲಯದ ದಾಳಿಯ ಪ್ರಕರಣವನ್ನು ಜಮೀರ್ ಅವರ ವಕೀಲರು ಮತ್ತು ಲೆಕ್ಕಾಧಿಕಾರಿಗಳುಯ ನೋಡಿಕೊಳ್ಳುತ್ತಾರೆ. ಪಕ್ಷದ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.
Advertisement
Advertisement
ಇಡಿ ದಾಳಿ ಬಳಿಕ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ನಡುವೆ ಬಿರುಕು ಉಂಟಾಗಿದೆ ಎನ್ನಲಾಗಿತ್ತು. ಇತ್ತ ಇಡಿ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಜಮೀರ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ವೇಳೆ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದ ಜಮೀರ್ ಅಹ್ಮದ್ ಮಾತನಾಡಿದ್ದರು. ಇದನ್ನೂ ಓದಿ: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ: ಜಮೀರ್ಗೆ ಸಿದ್ದರಾಮಯ್ಯ ಬುಲಾವ್