ಅಹಮದಾಬಾದ್: ಮನೆಯ ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದರಿಂದಾಗಿ ಸಂತೋಷಗೊಂಡ ಕುಟುಂಬವೊಂದು ಕರುವಿಗೆ ಚಿನ್ನ ಮತ್ತು ಬೆಳ್ಳಿಯ ಸರವನ್ನು ತೊಡಿಸಿ ವಿಶಿಷ್ಟವಾಗಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
Advertisement
ಗುಜರಾತ್ನ ನಿವಾಸಿಯಾಗಿರುವ ವಿಜಯ್ ಪ್ರಸನ್ನ ಎಂಬವರ ಮನೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಹಸು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಇದರಿಂದ ಸಂತೋಷಗೊಂಡ ವಿಜಯ್ ಕುಟುಂಬದವರು ಮನೆಗೆ ಗೃಹಲಕ್ಷ್ಮಿಯ ಆಗಮನವಾಗಿದೆ ಎಂದು ಸಮಾರಂಭವನ್ನು ಮಾಡಿ ಕರುವಿಗೆ ಪೂಜೆ ಮಾಡಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ತೊಡಿಸಿ ಸಂಭ್ರಮಪಟ್ಟಿದ್ದಾರೆ.
Advertisement
Advertisement
ವಿನಯ್ ಪ್ರಸನ್ನ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿಯಂತೆ. ಹಾಗಾಗಿ ತಮ್ಮ ಮನೆಯಲ್ಲಿ ಹಸು ಹೆಣ್ಣು ಕರು ಹಾಕುತ್ತಿದ್ದಂತೆ. ಸಮಾರಂಭವನ್ನು ಮಾಡಿ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಯಾವ ರೀತಿ ಸಂಭ್ರಮಪಡುತ್ತಾರೋ ಅದೇ ರೀತಿ ಹಸು ಮತ್ತು ಕರುವಿಗೆ ಹೊಸ ಬಟ್ಟೆಯನ್ನು ತೊಡಿಸಿ ಪೂಜೆ ಮಾಡಿ ಮನೆಮಂದಿ ಖುಷಿ ಪಟ್ಟಿದ್ದಾರೆ.
Advertisement
ಕರುವಿಗೆ ಉಡುಗೊರೆ ನೀಡುವ ಸಮಾರಂಭದ ವೀಡಿಯೋದಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರೂ ಕೂಡ ಸಾಲಾಗಿ ನಿಂತಿದ್ದಾರೆ. ಕುಟುಂಬ ಸದಸ್ಯರು ಗೋವುಗಳಿಗೆ ಹೊಸ ಬಟ್ಟೆಯನ್ನು ಹೊದಿಸಿದ್ದಾರೆ. ಹಣ್ಣು ಹಂಪಲನ್ನು ನೀಡಿದ ಮೇಲೆ ಬಾಕ್ಸ್ ನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮನೆಯ ಮಹಿಳಾ ಸದಸ್ಯರು ಕರುವಿಗೆ ಹಾಕುತ್ತಿರುವ ದೃಶ್ಯವನ್ನು ಗಮನಿಸಬಹುದಾಗಿದೆ.