ಕಾರವಾರ: ರಾಜ್ಯಾದ್ಯಂತ ಕಳೆದ ಐದು ದಿನದಿಂದ ಬಸ್ ಸಂಚಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದು, ವರ್ಗಾವಣೆ ಆದೇಶ ಬರುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ವಾಯುವ್ಯ ಸಾರಿಗೆ ನೌಕರರು ಕೆಲಸಕ್ಕೆ ಹಾಜುರಾಗಿದ್ದಾರೆ.
Advertisement
ನೌಕರರು ಕೆಲಸಕ್ಕೆ ಹಾಜುರಾಗುತಿದ್ದಂತೆ ಜಿಲ್ಲೆಯ ವಿವಿಧೆಡೆ ಹಾಗೂ ಗೋವಾ ಭಾಗಕ್ಕೆ ಸಂಚಾರ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ 60 ಬಸ್ ಗಳು ರಸ್ತೆಗಿಳಿದಿವೆ. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರಲ್ಲಿ ಹಲವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾತ್ರ ವಾಯುವ್ಯ ಸಾರಿಗೆ ಬಸ್ಗಳು ಇರುವ ನೌಕರರನ್ನು ಬಳಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
Advertisement
Advertisement
ನಿನ್ನೆ ದಿನ ಮುಷ್ಕರ ಹಿನ್ನಲೆಯಲ್ಲಿ 40 ಜನ ಸಾರಿಗೆ ಸಿಬ್ಬಂದಿಯನ್ನ ಹುಬ್ಬಳ್ಳಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇಂದು ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಲಾಗಿತ್ತು. ವೀಕೆಂಡ್ ಮತ್ತು ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬಸ್ಗಳು ಸಂಚಾರ ಪ್ರಾರಂಭಿಸಿರುವುದು ಖುಷಿ ಕೊಟ್ಟಿದ್ದು, ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.
Advertisement