– ಕಾರ್, ಹೆಚ್ಚು ವರದಕ್ಷಿಣೆ ತರುವಂತೆ ಕಿರುಕುಳ
ಅಹ್ಮದಾಬಾದ್: ಹೆಚ್ಚು ವರದಕ್ಷಿಣೆ ತರದ್ದಕ್ಕೆ ತನ್ನ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಮಹಿಳೆಗೆ ಪತಿ ಕಿರುಕುಳ ನೀಡಿ, ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ.
ಗುಜರಾತ್ನ ಅಹ್ಮದಾಬಾದ್ನ 43 ವರ್ಷದ ಮಹಿಳೆ ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವರದಕ್ಷಿಣೆ ನೀಡುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಪೀಡಿಸುತ್ತಾನೆ, ಆತನೂ ಸಹ ತನ್ನ ಸ್ನೇಹಿತರ ಪತ್ನಿಯೊಂದಿಗೆ ಫ್ಲರ್ಟ್ ಮಾಡುತ್ತಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ.
Advertisement
Advertisement
ಅನುಪಮಾ(ಹೆಸರು ಬದಲಿಸಲಾಗಿದೆ) ಹಾಗೂ ಪಾರ್ಥ್(ಹೆಸರು ಬದಲಿಸಲಾಗಿದೆ) 2002ರಲ್ಲಿ ವಿವಾಹವಾಗಿದ್ದು, ಈ ವೇಳೆ ಮಹಿಳೆಯ ಕುಟುಂಬದವರು 50 ತೊಲೆ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದಾರೆ. ವಿವಾಹದ ವೇಳೆ ಮಹಿಳೆಯ ಅಳಿಯಂದಿರು ಸುಳ್ಳು ಹೇಳಿದ್ದು, ಪಾರ್ಥ್ ಎಂಬಿಎ ಓದಿದ್ದಾನೆ. ಅಲ್ಲದೆ ಬಟ್ಟೆ ಮಿಲ್ ಒಡೆಯ ಎಂದು ಹೇಳಿದ್ದಾರೆ. ವಿವಾಹವಾಗಿ 6 ತಿಂಗಳಾಗುತ್ತಿದ್ದಂತೆ ಕುಟುಂಬಸ್ಥರು ಕಾರ್ ಹಾಗೂ ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪಾರ್ಥ್ ನನ್ನನ್ನು ಹೊಡೆದಿದ್ದಾನೆ. 2005ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದೆ. ಈ ವೇಳೆ ಪತಿ ಎಂಬಿಎ ಓದಿಲ್ಲ ಎಂಬುದು ತಿಳಿಯಿತು ಎಂದು ಮಹಿಳೆ ಆರೋಪಿಸಿದ್ದಾಳೆ.
Advertisement
Advertisement
ಪತಿಯ ಬ್ಯುಸಿನೆಸ್ ಸರಿಯಾಗಿ ನಡೆಯದ ಕಾರಣ ನಾನೇ ಟ್ವಾವೆಲ್ ಏಜೆನ್ಸಿ ಪ್ರಾರಂಭಿಸಿದೆ. ಈ ವೇಳೆ ಪತಿ ವಿಪರೀತ ಕುಡಿಯುವುದು ಹಾಗೂ ಜೂಜು ಆಡುವುದರಲ್ಲಿ ತೊಡಗಿದ. ಅಲ್ಲದೆ ತನ್ನ ಸ್ನೇಹಿತರೊಂದಿಗೆ ಫ್ಲರ್ಟ್ ಮಾಡುವಂತೆ ಒತ್ತಾಯ ಮಾಡಲು ಪ್ರಾರಂಭಿಸಿದ. ಇದಕ್ಕೆ ಪ್ರತಿಯಾಗಿ ಆತನೂ ತನ್ನ ಸ್ನೇಹಿತರ ಪತ್ನಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದ. ನಂತರ 2019ರಲ್ಲಿ ಪತಿ ಅಮೆರಿಕಕ್ಕೆ ತೆರಳಿದ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾಳೆ.
ಲಾಕ್ಡೌನ್ನಿಂದಾಗಿ ಮಹಿಳೆ ನಡೆಸುತ್ತಿದ್ದ ಟ್ರಾವೆಲ್ ಏಜೆನ್ಸಿ ಸಹ ನಷ್ಟದಲ್ಲಿ ಮುಳುಗಿತು. ಈ ವೇಳೆ ತನ್ನ ಅಳಿಯಂದಿರ ಬಳಿ ವರದಕ್ಷಿಣೆಯಾಗಿ ನೀಡಿದ ಚಿನ್ನವನ್ನು ಮರಳಿ ನೀಡಲು ಮಹಿಳೆ ಕೇಳಿಕೊಂಡಿದ್ದಾಳೆ. ಆದರೆ ಅವರು ಒಪ್ಪಿಲ್ಲ, ಚಿನ್ನ ನೀಡದೆ ಮನೆಯಿಂದ ಹೊರ ಹಾಕಿದ್ದಾರೆ. ಹೀಗಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾಳೆ.