Advertisements

ಲಾಕ್‍ಡೌನ್ ಎಫೆಕ್ಟ್- ಕೆಲ ತರಕಾರಿ ಬೆಲೆ ದುಬಾರಿ

ಮೈಸೂರು: ಲಾಕ್‍ಡೌನ್ ಎಫೆಕ್ಟ್ ನಿಂದ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

Advertisements

ಬಿನ್ಸ್ ಪ್ರತಿ ಕೆ.ಜಿ.ಗೆ 50 ರೂ. ತಲುಪಿದೆ. ಹಾಪ್‍ಕಾಮ್ಸ್ ನಲ್ಲಿ ಕೆ.ಜಿ ಗೆ 70 ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿತ್ಯ ಮಾರುಕಟ್ಟೆಗೆ 50 ಕ್ವಿಂಟಲ್ ಬಿನ್ಸ್ ಬರುತ್ತಿತ್ತು. ಈ ವರ್ಷ ಇದು 90 ಕ್ವಿಂಟಲ್ ಗೆ ತಲುಪಿದ್ದರೂ ಬೆಲೆ ಮಾತ್ರ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಉಳಿದ ತರಕಾರಿಗಳಿಗೆ ಹೋಲಿಸಿದರೆ ಬೀನ್ಸ್‍ಗೆ ಬೇಡಿಕೆ ಹೆಚ್ಚಿದೆ. ಜೊತೆಗೆ ಕೇರಳದ ವರ್ತಕರು ಬೀನ್ಸ್ ಹೆಚ್ಚಾಗಿ ಖರೀದಿಸುತ್ತಿರುವ ಕಾರಣ ದರ ಸಹಜವಾಗಿಯೇ ಹೆಚ್ಚಾಗಿದೆ.

Advertisements

ಪ್ರಮುಖ ತರಕಾರಿಗಳ ಪ್ರತಿ ಕೆ.ಜಿ.ಯ ದರ ಹೀಗಿದೆ: ಹೂಕೋಸು 19 ರೂ., ನುಗ್ಗೆ ಕಾಯಿ 65 ರೂ., ಹಸಿಮೆಣಸಿನಕಾಯಿ 15 ರೂ., ಸಿಹಿಗುಂಬಳ 10 ರೂ., ಎಲೆಕೋಸು 6 ರೂ., ಬದನೆಕಾಯಿ 14 ರೂ., ದಪ್ಪ ಮೆಣಸಿನಕಾಯಿ 32 ರೂ. ಹಾಗೂ ಕ್ಯಾರೇಟ್ 32 ರೂಪಾಯಿ ಇದೆ.

Advertisements
Exit mobile version