ಕೊಹಿಮಾ: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಯುವಕ ರೋಸ್ ನೀಡುವ ಬದಲು ಬಂದೂಕು ನೀಡಿದ್ದಾನೆ. ಆದರೆ ಪ್ರೇಯಸಿ ಮಾತ್ರ ಗನ್ ಹಿಡಿದ ರೋಮಿಯೊನನ್ನು ಕಂಡು ಅಷ್ಟೇನು ಇಂಪ್ರೆಸ್ ಆಗಿಲ್ಲ. ಯುವಕ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
Advertisement
ನಾಗಲ್ಯಾಂಡ್ನ ಪದುಂಪುಖುರಿ ಪ್ರದೇಶದ ದಿಮಾಪುರ್ನಲ್ಲಿ ಘಟನೆ ನಡೆದಿದ್ದು, 25 ವರ್ಷದ ಯುವಕನನ್ನು ಟೋರಿನ್ ತಿಖಿರ್ ಎಂದು ಗುರುತಿಸಲಾಗಿದೆ. .22 ಕ್ಯಾಲಿಬರ್ ಪಿಸ್ತೂಲ್ ಬಾಡಿಗೆ ಪಡೆದು ಪ್ರೇಯಸಿಗೆ ನೀಡುವ ಮೂಲಕ ಇಂಪ್ರೆಸ್ ಮಾಡಲು ನೋಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ದಿಮಾಪುರ್ ಪೊಲೀಸರು ಯುವಕನನ್ನು ಬಂಧಿಸಿದ್ದು, ಪಿಸ್ತೂಲ್ ಹಾಗೂ 3 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಗರ್ಲ್ಫ್ರೆಂಡ್ ಇಂಪ್ರೆಸ್ ಮಾಡಲು ಪಿಸ್ತೂಲ್ ನ್ನು ಬೇರೆಯವರ ಬಳಿ ಪಡೆದಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಕಳ್ಳತನ ಮಾಡಿ ಕ್ಷಮಿಸಿ ಎಂದು ಪತ್ರ ಬರೆದ ಕಳ್ಳ
Advertisement
ಘಟನೆಗೆ ಸಂಬಂಧಿಸಿದಂತೆ ದಿಮಾಪುರ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
Advertisement
ಈ ಕುರಿತು ಟ್ವೀಟ್ ಸಹ ಮಾಡಿರುವ ದಿಮಾಪುರ್ ಪೊಲೀಸರು, ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ಕೊಡುವ ಬದಲಿಗೆ ಗನ್ ನೀಡಿದ್ದಾನೆ. ಆದರೆ ಪ್ರಿಯತಮೆ ಅಷ್ಟೇನು ಇಂಪ್ರೆಸ್ ಆಗಿಲ್ಲ. .22 ಕ್ಯಾಲಿಬರ್ ಪಿಸ್ತೂಲ್ನ್ನು ಅಕ್ರಮವಾಗಿ ಹೊಂದಿದ್ದಕ್ಕೆ ಪದಂಪುಖುರಿ ಪ್ರದೇಶದಿಂದ ಒಬ್ಬನನ್ನು ಬಂಧಿಸಲಾಗಿದೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.