ರೋಮ್: ಜ್ವಾಲಾಮುಖಿ ಬೂದಿಯಲ್ಲಿ ಹೂತುಹೋಗಿದ್ದ 2000 ವರ್ಷಗಳ ಹಳೆಯ ರೋಮನ್ ಕಾಲದ ಪುರಾತನ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿಯೊಂದು ಇಟಲಿಯ ಪಾಂಪೆ ನಗರದಲ್ಲಿ ಪತ್ತೆಯಾಗಿದೆ.
ಈ ಪುರಾತನ ಕಾಲದ ಫಾಸ್ಟ್ ಫುಡ್ ಸ್ಟಾಲ್ ಸಂಶೋಧಕರಲ್ಲಿ ಬೆರಗು ಮೂಡಿಸಿದೆ. ರೋಮನ್ ಕಾಲದ ಆಹಾರ ಪದ್ಧತಿ ಹೇಗಿತ್ತು ಎನ್ನುವುದರ ಸುಳಿವು ಸಿಕ್ಕಂತಾಗಿದೆ.
Advertisement
???? ???????????????????????????????????????????????????????????? ???????????????????????????????????????? ???? | #Pompei ne cessera de nous surprendre ! Un thermopolium, lieu de restauration rapide de la Rome Antique, vient d’être découvert sur le site, recouvert par les cendres lors de l’éruption du Vésuve en 79 de notre ère. ???? pic.twitter.com/R0EykVDj9a
— Secrets d’Histoire (@secretshistoire) December 26, 2020
Advertisement
ವಿವಿಧ ರೀತಿಯ ಪೇಂಟಿಂಗ್ಸ್ ನಿಂದ ಅಲಂಕಾರ ಮಾಡಿದ ಬಾರ್ ಕೌಂಟರ್ ಇದ್ದಾಗಿದ್ದು, ಈವರೆಗೆ ಜ್ವಾಲಾಮುಖಿ ಬೂದಿಯಿಂದ ಮುಚ್ಚಿಹೋಗಿತ್ತು. ಕಳೆದ ವರ್ಷ ಪುರಾತತ್ವಶಾಸ್ತ್ರಜ್ಞರು ಅನ್ವೇಷಣೆ ಮಾಡಿದ್ದಾರೆ. ಈ ಜಾಗದ ಸಂಪೂರ್ಣವಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
Advertisement
The Thermopolium of #RegioV, a bar in #Pompeii, complete with an image of a Nereid riding a sea-horse, had previously been partially excavated in 2019. It now emerges in its entirety, with rich decorative still life frescoes, food residues, animal bones & victims of the eruption. pic.twitter.com/OEqh2sbAmm
— Pompeii Sites (@pompeii_sites) December 26, 2020
Advertisement
ಕ್ರಿಸ್ತಶಕ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಿಸಿದ ಜ್ವಾಲಾಮುಖಿಯಿಂದ ಪಾಂಪೆ ನಗದ ಕುದಿಯುವ ಲಾವಾದಲ್ಲಿ ಹೂತುಹೋಗಿತ್ತು. ಈ ವೇಳೆ 2,000 ದಿಂದ 15,000 ಮಂದಿ ಸಾವನ್ನಪ್ಪಿದ್ದರು ಎಂದು ಇತಿಹಾಸ ಹೇಳುತ್ತಿದೆ. ಈಗ ಪತ್ತೆಯಾಗಿರುವ ರೊಮನ್ ಕಾಲದ ಫುಡ್ ಸ್ಟಾಲ್ ಥರ್ಮೋಪೋಲಿಯಂ ಎಂದು ಕರೆಯಲಾಗಿದೆ. ಸಿಲ್ವರ್ ವೆಡ್ಡಿಂಗ್ ಸ್ಟ್ರೀಟ್ ಮತ್ತು ಆ್ಯಲಿ ಆಫ್ ಬಾಲ್ಕನೀಸ್ ಎಂಬ ಪ್ರದೇಶದಲ್ಲಿ ಈ ಸ್ಟಾಲ್ ಪತ್ತೆ ಹಚ್ಚಲಾಗಿದೆ.
ಸ್ಥಳದಲ್ಲಿ ಬಾತುಕೋಳಿ ಮೂಳೆಯ ಚೂರು, ಮಣ್ಣಿನ ಮಡಿಕೆ, ಹಂದಿ, ಮೇಕೆ ಹಾಗೂ ಮೀನಿನ ಅವಶೇಷಗಳು ಪತ್ತೆಯಾಗಿವೆ. ವೈನ್ನ ರುಚಿ ಮಾರ್ಪಡಿಸಲು ಬಳಸುವ ಕೆಲವು ವಸ್ತಗಳು ಪತ್ತೆಯಾಗಿವೆ. ಅಂಗಡಿಯ ಗೋಡೆಗಳ ಮೇಲೆ ಕೋಳಿ ಹಾಗೂ ಬಾತುಕೋಳಿ ಚಿತ್ರವನ್ನು ಕಾಣಬಹುದಾಗಿದೆ. ಈ ಎಲ್ಲಾ ಚಿತ್ರಣವನ್ನು ಗಮನಿಸಿದ ನಂತರ ಇಲ್ಲಿ ಒಂದು ಹೋಟೆಲ್ ಇದ್ದಿರಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಬಹುಶಃ ಜ್ವಾಲಾಮುಖಿ ಸ್ಫೋಟದ ಹಿನ್ನಲೆ ಅಂಗಡಿ ಮುಚ್ಚಿ ಹೋಗಿರಬಹುದು. ಈ ಥರ್ಮೀಪೋಲಿಯಂ ಜನರ ಜೀವನ ಹೇಗಿತ್ತು ಎಂಬುದು ತಿಳಿಯಬಹುದಾಗಿದೆ. ಅಂಗಡಿ ಮಾತ್ರವಲ್ಲದೇ ವ್ಯಕ್ತಿ ಅಸ್ತಪಂಜರವು ದೊರಕಿದೆ. ಸುಮಾರು 50 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ರೋಮನ್ ಸಾಮ್ರಾಜ್ಯ ಅತೀ ಶ್ರೀಮಂತ ನಗರದಲ್ಲಿ ಒಂದಾಗಿದ್ದ ಪಾಂಪೆ ಸುಮಾರು 110 ಎಕರೆಯಷ್ಟು ವಿಸ್ತೀರ್ಣವಿದೆ. ಜ್ವಾಲಾಮುಖಿ ಬೂದಿಯಡಿ ಹಲವು ಕಟ್ಟಡಗಳು ಅನೇಕ ವಸ್ತುಗಳು ಹಾಗೂ ಮೃತದೇಹಗಳು ಇಲ್ಲಿ ಹುದುಗಿಹೋಗಿದೆ ಎಂದು ಎಂದು ಆರ್ಕಿಯಾಲಾಜಿಕಲ್ ಪಾಕ್ ಆಫ್ ಪಾಂಪೆಯ ನಿರ್ದೇಶಕ ಮಸ್ಸೀಮೋ ಒಸ್ಸಾನಾ ಹೇಳಿದ್ದಾರೆ.