LatestMain PostNational

ರೈಲ್ವೇ ಪ್ಲಾಟ್‌ಫಾರಂ ಟಿಕೆಟ್‌ ದರ 30 ರೂ. ಏರಿಕೆ

ನವದೆಹಲಿ: ಇತ್ತೀಚಿಗೆ ಅಲ್ಪ ದೂರದ ರೈಲ್ವೇ ಪ್ರಯಾಣ ಹೆಚ್ಚಿಸಿದ್ದ ರೈಲ್ವೇ ಇಲಾಖೆ ಈಗ ದಿಢೀರ್‌ ಪ್ಲಾಟ್‍ಫಾರಂ ಟಿಕೆಟ್‌ ದರವನ್ನು ಹೆಚ್ಚಿಸಿದೆ.

ಇದುವರೆಗೆ 10 ರೂಪಾಯಿ ಇದ್ದ ಪ್ಲಾಟ್‍ಫಾರಂ ಟಿಕೆಟ್ ಬೆಲೆಯನ್ನು ಏಕಾಏಕಿ 30 ರೂಪಾಯಿಗೆ ಹೆಚ್ಚಿಸಿದೆ. ಅಂದರೆ ಒಂದೇ ಬಾರಿಗೆ 20 ರೂ. ಹೆಚ್ಚಳವಾಗಿದೆ. ತಕ್ಷಣದಿಂದಲೇ ಇದು ಎಲ್ಲಾ ರೈಲ್ವೇ ವಲಯಗಳಲ್ಲಿ ಜಾರಿಗೆ ಬಂದಿದೆ. ಆದ್ರೆ ಇದು ತಾತ್ಕಾಲಿಕ ಮಟ್ಟಿಗೆ ಮಾತ್ರ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 10 ರೂ.ಯಿಂದ 50 ರೂಪಾಯಿ ಆಯ್ತು ಪ್ಲಾಟ್‍ಫಾರಂ ಟಿಕೆಟ್

ಪ್ಲಾಟ್‌ಫಾರಂನಲ್ಲಿ ಜನದಟ್ಟಣೆ ಜಾಸ್ತಿ ಆಗುತ್ತಿದೆ. ಹೀಗಾಗಿ ನಿಯಂತ್ರಣ ಮಾಡುವ ಉದ್ದೇಶದಿಂದ ಪ್ಲಾಟ್‌ಫಾರಂ ಟಿಕೆಟ್‌ ದರವನ್ನು ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

Leave a Reply

Your email address will not be published.

Back to top button