– ಕೆಲ ರಾಜಕೀಯ ಪಕ್ಷಗಳು ರೈತರ ದಿಕ್ಕು ತಪ್ಪಿಸಿವೆ
– ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ
ಚಿತ್ರದುರ್ಗ: ರೈತರ ಹೆಸರಿನಲ್ಲಿ ರಾಜಕೀಯ ಪುಂಡಾಟ ಸರಿಯಲ್ಲ. ದಾಂಧಲೆ ಮಾಡುವುದು ರೈತ ಮತ್ತು ದೇಶಭಕ್ತ ಮಾಡುವ ಕಾರ್ಯವಲ್ಲ. ಇದು ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದ್ದಾರೆ.
Advertisement
ದೆಹಲಿ ದಾಂಧಲೆ ಪ್ರಕರಣದ ಬಗ್ಗೆ ತನಿಖೆ, ಕ್ರಮ ಆಗಬೇಕು. ಕೆಂಪುಕೋಟೆ ಮೇಲೆ ದಾಳಿ ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಸರಿಯಲ್ಲ. ಕೆಲ ರಾಜಕೀಯ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತೀವೆ. ದೇಶದ ರೈತರು ಈ ಬಗ್ಗೆ ಗಮನ ಹರಿಸಬೇಕು. ಸಂವಿಧಾನಕ್ಕೆ ಗೌರವ ಕೊಡುವ ದಿನದಂದು ಯವುದೇ ಬೇಡಿಕೆಯಾದರೂ ಶಾಂತಿಯುತವಾಗಿ ಮಾಡಬೇಕಿತ್ತು. ರೈತರ ಹೆಸರಿನಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಅಧಿಕಾರ ಇಲ್ಲದಾಗ ಕಾಂಗ್ರೆಸ್ ಪಕ್ಷದಿಂದ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತದೆ. ಕಾಂಗ್ರೆಸ್ ಅಧಿಕಾರವಿದ್ದಾಗ ವಿಪಕ್ಷಗಳನ್ನು ಮಣಿಸುವ ನೀತಿ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಟಿಸುತ್ತಿದೆ. ಸಿಎಎ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ನಿಂದ ಗಲಾಟೆಯಾಗಿತ್ತು. ಆಗ ಪಿಸ್ತೂಲ್ ಹಿಡಿದು ತಿರುಗಿದ್ದರು. ನಿನ್ನೆ ತಲವಾರ್ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ವಿಚಾರ, ಸಿದ್ಧಾಂತ, ದೇಶವನ್ನೂ ಮರೆತಂತಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಭಯೋತ್ಪಾದಕ ಕೃತ್ಯಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ವಿರುದ್ಧವಾಗಿ ಚಾಟಿ ಬೀಸಿದ್ದಾರೆ.
Advertisement
ಸಿದ್ಧರಾಮಣ್ಣ ಅವರಿಗೆ ರೈತಪರ ಮಾತಾಡುವ ನೈತಿಕ ಹಕ್ಕಿಲ್ಲ. ಸಿಎಂ ಆಗಿದ್ದಾಗ ರಾಜ್ಯದಲ್ಲಿ 3ಸಾವಿರ ರೈತರ ಆತ್ಮಹತ್ಯೆ ಮಾಡಿದ್ದಾರೆ. ಸಮಾಜವಾದದ ಹೆಸರಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಜಾ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶೀಘ್ರ ರಾಜಕೀಯ ಅಂತ್ಯ ಕಾಣಲಿದ್ದಾರೆ. ಮೊನ್ನೆ ಜೈಲಿಂದ ಬಂದಾಗ ಡಿಕೆಶಿ ಮೆರವಣಿಗೆ ಮೂಲಕ ಬಂದಿದ್ದಾರೆ. ಮತ್ತೆ ಡಿಕೆಶಿ ಅಲ್ಲಿಗೆ ಹೋಗ್ತಾರೆ ಎಂದು ಹೇಳಿದ್ದಾರೆ.