ಚಿಕ್ಕಬಳ್ಳಾಪುರ: ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನ ತಡೆಯುವ ಸಲುವಾಗಿ ರೈತರು ಆರ್ಥಿಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಕಷ್ಟಗಳಿಂದ ಪಾರು ಮಾಡುವ ಸಲುವಾಗಿ ಪ್ರಧಾನಿ ಮಂತ್ರಿ ಕೆಲ ಕೃಷಿ ಕಾಯ್ದೆಗಳನ್ನು ತಿದ್ದುಪಡಿ ತಂದಿದ್ದಾರೆ ಅಂತ ಸಚಿವ ಸುಧಾಕರ್ ಹೇಳಿದರು.
Advertisement
ಚಿಕ್ಕಬಳ್ಳಾಪುರ ನಗರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣ ದಲ್ಲಿ 72 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನಡೆಸಿ ಮಾತನಾಡಿದ ಸಚಿವರು, ದುರದೃಷ್ಟವಶಾತ್ ಕೆಲ ಸಂಘಟನೆಗಳು, ಮಧ್ಯವರ್ತಿಗಳು, ದಲ್ಲಾಳಿಗಳು ಹಾಗೂ ರಾಜಕೀಯ ಪಕ್ಷಗಳು ರೈತರನ್ನ ತಪ್ಪು ದಾರಿಗೆ ಕೊಂಡೊಯ್ಯುವ ಕೆಲಸ ಮಾಡ್ತಿದ್ದು ಅದು ಸಫಲ ಆಗಲ್ಲ. ಕಿಸಾನ್ ಸಮ್ಮಾನ್ ಯೋಜನೆ ಒಂದು ಐತಿಹಾಸಿಕ ಕಾರ್ಯಕ್ರಮ ಅಂತ ಬಣ್ಣಿಸಿದರು.
Advertisement
ಭಾರತವು 1950ರಲ್ಲಿ ಗಣರಾಜ್ಯವಾದಾಗ ಕುವೆಂಪು ಅವರು ರಚಿಸಿದ 'ಶ್ರೀ ಸಾಮಾನ್ಯರ ದೀಕ್ಷಾಗೀತೆ'
ಕೊನೆಗೊಂಡಿತೋ ಓರೋರ್ವರ ಗರ್ವದ ಕಾಲ
ಇದು ಸರ್ವರ ಕಾಲ
ಸರ್ವೋದಯ ಸರ್ವೋದಯ
ಸರ್ವೋದಯ ಯುಗಮಂತ್ರ
ಸರ್ವೋದಯವೇ ಸ್ವಾತಂತ್ರ್ಯ ಶ್ರೀತಂತ್ರ
ಮೇಲಿಲ್ಲವೋ ಕೀಳಿಲ್ಲವೋ
ಸರ್ವ ಸಮಾನದ ರಾಜ್ಯ
ಅಧ್ಯಕ್ಷನೋ ಸೇನಾನಿಯೋ
ಕಮ್ಮಾರನೋ ಚಮ್ಮಾರನೋ
ಕಾಯಕವೆಲ್ಲವೂ ಪೂಜ್ಯ pic.twitter.com/FWzpVoEG3E
— Dr Sudhakar K (@mla_sudhakar) January 26, 2021
Advertisement
ಯಡಿಯೂರಪ್ಪನವರು 6000ದ ಜೊತೆಗೆ 4000 ಕೊಟ್ಟು ಪ್ರತಿ ರೈತನ ಖಾತೆಗೆ ಪ್ರತಿ ವರ್ಷ ಜಮೆ ಮಾಡ್ತಿದ್ದಾರೆ. ನಾನು ಸಹ ರೈತ ಮುಖಂಡರಲ್ಲಿ ಮನವಿ ಮಾಡ್ತೇನೆ. ಈ ಕಾಯ್ದೆಗಳ ಬಗ್ಗೆ ನಾನು ಸಹ ಸಮಗ್ರ ಅಧ್ಯಯನ ಮಾಡಿದ್ದೇನೆ. ಇದರಿಂದ ರೈತರಿಗೆ ಲಾಭವೇ ಹೊರತು ಯಾವುದೇ ನಷ್ಟ ಇಲ್ಲ. ಕಾಯ್ದೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ ಎಂದರು.
Advertisement
ಡಿಕೆ ಶಿವಕುಮಾರ್ ರೈತರ ಟ್ರ್ಯಾಕ್ಟರ್ ಗಳನ್ನ ಬಿಡಿಸಲು ನಾವು ಹೋಗ್ತೇವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸುಧಾಕರ್, ದೇಶದಲ್ಲಿ ದೀರ್ಘ ಕಾಲ ಆಡಳಿತ ಮಾಡಿದ್ದು ಯಾರು..? ರೈತರಿಗಾಗಿ ಅವರು ಏನು ಮಾಡಿದ್ರು..? ಕೆಲವರು ಕಟ್ ರೂಟ್ ನಲ್ಲಿ ರೈತರನ್ನ ಹೈಜಾಕ್ ಮಾಡಲು ಹೊರಟಿದ್ದಾರೆ. ಆದರೆ ನಾವು ಆ ರೀತಿ ಮಾಡಲ್ಲ ಅಂತ ಡಿಕೆಶಿಗೆ ತಿರುಗೇಟು ನೀಡಿದ್ರು.