ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

ಬೆಂಗಳೂರು: ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕಾ ಚಿಂಚೋಳಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕಾ ಅವರು ರಾಕೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸೀಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.
ರಾಕೇಶ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇನೆ. 2021ರ ಡಿಸೆಂಬರ್10ರಲ್ಲಿ ಸಂಪ್ರದಾಯಬದ್ಧವಾಗಿ ಮದುವೆಯಾಗಲಿದ್ದೇನೆ. ಈಗಷ್ಟೇ ಮದುವೆ ಸಂಭ್ರಮ ಶುರುವಾಗಿದೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆ ಬೇಕು ಎಂದು ಬರೆದುಕೊಂಡು ರಿಜಿಸ್ಟರ್ ಮ್ಯಾರೇಜ್ ಸಂದರ್ಭದಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ನಾನು ರಾಕೇಶ್ ರಿಜಿಸ್ಟರ್ ಮದುವೆ ಆಗಲು ಒಂದು ಕಾರಣವಿದೆ. ರಾಕೇಶ್ ಅವರು ಅಮೆರಿಕದ ಬ್ಯಾಂಕ್ ಒಂದರಲ್ಲಿ ಉಪಾಧ್ಯರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಆತಂಕವಿರುವ ಕಾರಣದಿಂದಾಗಿ ವೀಸಾಗೆ ಸಂಬಂಧಿಸಿದಂತೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆಯಂತೆ. ಹೀಗಾಗಿ ರಿಜಿಸ್ಟರ್ ಮದುವೆಯಾಗಿದ್ದು, ಡಿಸೆಂಬರ್ 10-11ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಸಾಕಷ್ಟು ಜನರು ಪ್ರಿಯಾಂಕಾ ಚಿಂಚೋಳಿಗೆ ಶುಭಾ ಹಾರೈಸುತ್ತಿದ್ದಾರೆ. ಪ್ರಿಯಾಂಕಾ ಹಾಗೂ ರಾಕೇಶ್ರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಪ್ರಿಯಾಂಕಾ ಪರಿಚಿತರ ಮೂಲಕ ರಾಕೇಶ್ ಪರಿಚಯ ಆಗಿದೆ. ಎರಡೂ ಮನೆಯವರೂ ಖುಷಿಯಿಂದ ಈ ಮದುವೆ ನಿಕ್ಕಿ ಮಾಡಿದ್ದಾರೆ.
View this post on Instagram
ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕಾ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಿಯಾಂಕಾ ಪ್ರೇಮಿಗಳ ದಿನದಂದು ಬೆಳಗ್ಗೆ ಸಾಂಪ್ರದಾಯಿಕ ಸೀರೆ ಉಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಂಜೆ ಕೆಂಪು ಬಣ್ಣದ ಉಡುಗೆ ತೊಟ್ಟು ಔತಣಕೂಟದಲ್ಲಿ ಮಿಂಚಿದ್ದರು. ಮದುವೆ ನಂತರದಲ್ಲಿ ರಾಜೇಶ್ ಮತ್ತೆ ಅಮೆರಿಕಕ್ಕೆ ಹೋಗುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ. ಪ್ರಿಯಾಂಕಾ ಮದುವೆ ನಂತರವೂ ನಟಿಸಲಿದ್ದಾರಂತೆ. ನಾನು ಯಾವುದೇ ಕೆಲಸ ಮಾಡಿದರೂ ಕೂಡ ಅವರಿಗೆ ಯಾವುದೇ ತೊಂದರೆ ಇಲ್ಲ. ನನ್ನ ಹುಡುಗ ನನಗೆ ತುಂಬ ಪ್ರೋತ್ಸಾಹ ನೀಡುತ್ತಾರೆ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.