ಬೆಂಗಳೂರು: ರಾಜ್ಯದಲ್ಲಿ ಇಂದು 8,161 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,91,826ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 148 ಸೋಂಕಿತರು ಸಾವನ್ನಪ್ಪಿದ್ದು, 751 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದು ಕೊರೊನಾದಿಂದ ಗುಣಮುಖರಾಗಿ 6,814 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 81,410 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಶರವೇಗದಲ್ಲಿ ಸಾಗುತ್ತಿದ್ದು ಇಂದು 2,294 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,12,087ಕ್ಕೆ ಏರಿಕೆಯಾಗಿದ್ದು, 35,4330 ಸಕ್ರಿಯ ಪ್ರಕರಣಗಳಿವೆ. ಇಂದು ಸಿಲಿಕಾನ್ ಸಿಟಿಯ 61 ಜನರನ್ನ ಕೊರೊನಾ ಬಲಿ ಪಡೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 1,755ಕ್ಕೆ ಏರಿಕೆಯಾಗಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 83, ಬಳ್ಳಾರಿ 551, ಬೆಳಗಾವಿ 298, ಬೆಂಗಳೂರು ಗ್ರಾಮಾಂತರ 63, ಬೆಂಗಳೂರು ನಗರ 2294, ಬೀದರ್ 61, ಚಾಮರಾಜನಗರ 17, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 88, ಚಿತ್ರದುರ್ಗ 114, ದಕ್ಷಿಣ ಕನ್ನಡ 247, ದಾವಣಗೆರೆ 318, ಧಾರವಾಡ 204, ಗದಗ 175, ಹಾಸನ 205, ಹಾವೇರಿ 78, ಕಲಬುರಗಿ 227, ಕೊಡಗು 8, ಕೋಲಾರ 47, ಕೊಪ್ಪಳ 238, ಮಂಡ್ಯ 153, ಮೈಸೂರು 1,331 (ಜಿಲ್ಲೆಯ ನಾಲ್ಕು ದಿನಗಳ ಸಂಖ್ಯೆ), ರಾಯಚೂರು 88, ರಾಮನಗರ 56, ಶಿವಮೊಗ್ಗ 276, ಉಡುಪಿ 217, ಉತ್ತರ ಕನ್ನಡ 141, ವಿಜಯಪುರ 135 ಮತ್ತು ಯಾದಗಿರಿ 132 ಹೊಸ ಪ್ರಕರಣಗಳ ವರದಿ ಆಗಿವೆ.
Advertisement
ಕೊರೋನಾ ವೈರಸ್ ನಿಂದ ಗುಣಮುಖರಾದವರ ಅಂಕಿ ಅಂಶಗಳು, ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುತ್ತದೆ. pic.twitter.com/PNfe38mFNf
— K'taka Health Dept (@DHFWKA) August 25, 2020
Advertisement