Bengaluru CityCinemaDistrictsKarnatakaLatestMain Post

ರಾಖಿಭಾಯ್ ಅಖಾಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ – ಶೂಟಿಂಗ್ ಆರಂಭ

ಬೆಂಗಳೂರು: ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ ‘ಕೆಜಿಎಫ್ ಚಾಪ್ಟರ್-2’ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ.

ಕೊರೊನಾ ಅಟ್ಟಹಾಸ, ಲಾಕ್‍ಡೌನ್‍ನಿಂದಾಗಿ ಬರೋಬ್ಬರಿ ನಾಲ್ಕು ತಿಂಗಳು ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಕಳೆದೊಂದು ತಿಂಗಳ ಹಿಂದೆ ಸರ್ಕಾರ ಶೂಟಿಂಗ್‍ಗೆ ಅನುಮತಿ ಸಿಕ್ಕಿದ್ದು, ಕೆಜಿಎಫ್ ಬಳಗ ಇಂದಿನಿಂದ ಚಿತ್ರೀಕರಣಕ್ಕೆ ಹಾಜರಾಗಿದೆ.

ಮಿನರ್ವ ಮಿಲ್‍ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಚಿತ್ರೀಕರಣವನ್ನು ಶುರು ಮಾಡಲಾಗಿದೆ. ಇದೀಗ ಕೆಜಿಎಫ್ ಚಿತ್ರತಂಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಹೊಸದಾಗಿ ಸೇರಿಕೊಂಡಿದ್ದಾರೆ. ಆದರೆ ಪ್ರಕಾಶ್ ರೈ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರರಂಡ ರಿವೀಲ್ ಮಾಡಿಲ್ಲ.

ಸದ್ಯಕ್ಕೆ ನಟಿ ಮಾಳವಿಕಾ ಅವಿನಾಶ್ ಹಾಗೂ ಪ್ರಕಾಶ್ ರೈ ಕಾಂಬಿನೇಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಕೆಲ ತಿಂಗಳ ನಂತರ ಚಿತ್ರೀಕರಣಕ್ಕೆ ಬಂದಿರುವುದರಿಂದ ನಟಿ ಮಾಳವಿಕಾ ಸಂತಸಪಟ್ಟಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

“ಆರು ತಿಂಗಳ ನಂತರ ಕೊರೊನಾ ಬ್ರೇಕ್ ಅಂತ್ಯವಾಗಿದೆ. ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ಈ ಮೂಲಕ ಪುನರ್ಜನ್ಮ ಸಿಕ್ಕಿದ್ದಂತೆ ಭಾಸವಾಗುತ್ತಿದೆ” ಎಂದು ಮಾಳವಿಕಾ ಬರೆದುಕೊಂಡಿದ್ದಾರೆ. ಅಲ್ಲದೇ ಯಾವ ಸಿನಿಮಾ ಗೆಸ್ ಮಾಡಿ? ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಟಿ ಮಾಳವಿಕಾ ಅವಿನಾಶ್ ಕೆಜಿಎಫ್ ಚಾಪ್ಟರ್ 1ರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಚಾಪ್ಟರ್ 2ನಲ್ಲೂ ತನ್ನ ಪಾತ್ರವನ್ನು ಮುಂದುವರಿಸಿದ್ದಾರೆ. ಸಣ್ಣ ಪಾತ್ರವಾದರೂ ಮಾಳವಿಕಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.

Leave a Reply

Your email address will not be published.

Back to top button