ಬೆಂಗಳೂರು: ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ತಂಡದಿಂದ ಹೊಸ ಅಪ್ಡೇಟ್ ಹೊರ ಬಂದಿದ್ದು, ಡಿಸೆಂಬರ್ 2, 2020ರಂದು ಯುವರತ್ನ ಸಿನಿಮಾದ ಹಾಡು ರಿಲೀಸ್ ಆಗಲಿದೆ.
Advertisement
ಇಂದು ಬೆಳಗ್ಗೆ 11 ಗಂಟೆಗೆ ಟ್ವೀಟ್ ಮೂಲಕ ಚಿತ್ರದ ಮಾಹಿತಿ ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಸಾಂಗ್ ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ. ಭಾನುವಾರ ಟ್ವೀಟ್ ಮಾಡಿದ್ದ ಸಂತೋಷ್ ಆನಂದರಾಮ್, ನಾಳೆ ಅಭಿಮಾನಿಗಳಿಗೆ ಅಭಿಮಾನದ ಸುದ್ದಿಗಳು. ಯುವರತ್ನ ನಿಮ್ಮ ಸ್ವತ್ತು ಬೆಳೆಸಿ ಹರಿಸಿ. ಸೋಮವಾರ ಬೆಳಗ್ಗೆ 11 ಗಂಟೆಗೆ ಗುಡ್ ನ್ಯೂಸ್ ನೀಡೋದಾಗಿ ಬರೆದುಕೊಂಡಿದ್ದರು.
Advertisement
Advertisement
ಪುನೀತ್ ರಾಜ್ಕುಮಾರ್ ಸಹ ಸಂತೋಷ್ ಆನಂದರಾಮ್ ಟ್ವೀಟ್ ನ್ನು ರಿಟ್ವೀಟ್ ಮಾಡಿಕೊಂಡಿದ್ದರು. ರಿಲೀಸ್ ಜೊತೆಗೂ ಮತ್ತೊಂದು ಸಿಹಿಯನ್ನ ಚಿತ್ರತಂಡ ನೀಡಿದೆ. ಡಿಸೆಂಬರ್ ಎರಡರಂದೇ ಯುವರತ್ನ ತೆಲಗು ಭಾಷೆಯಲ್ಲಿಯೂ ರಿಲೀಸ್ ಆಗಲಿದೆ.
Advertisement
#Yuvarathnaa "Power of Youth" single on December 2nd.#YuvarathnaaFirstSingle #PowerOfYouth @hombalefilms @VKiragandur @SanthoshAnand15 @MusicThaman @sayyeshaa @Dhananjayaka @ramjowrites @Karthik1423 @KRG_Connects @SillyMonks #NakashAziz pic.twitter.com/QOh2KEoYeG
— Puneeth Rajkumar (@PuneethRajkumar) November 23, 2020
`ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಮಾನದಿಂದ ,ಅಭಿಮಾನಿಗಳಿಗೆ ಅಭಿಮಾನಕ್ಕೋಸ್ಕರ………????????@PuneethRajkumar @hombalefilms @VKiragandur @MusicThaman @sayyeshaa @Dhananjayaka @Karthik1423 @SillyMonks @KRG_Connects @AzizNakash pic.twitter.com/TK4zLD0aon
— Santhosh Ananddram (@SanthoshAnand15) November 23, 2020