DistrictsKarnatakaLatestMain PostUdupi

ಯಾಸ್ ಎಫೆಕ್ಟ್ – ಉಡುಪಿಯಲ್ಲಿ ಗಾಳಿ ಮಳೆ

ಉಡುಪಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಪೂರ್ವ ಕರಾವಳಿಯಲ್ಲಿ ಯಾಸ್ ಚಂಡಮಾರುತ ಎದ್ದಿರುವ ಪರಿಣಾಮ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗಾಳಿ ಮಳೆಯಾಗುತ್ತಿದೆ.

ಇಂದು ಬೆಳಗ್ಗೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಕಾರ್ಕಳ, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕಳೆದ ಎರಡು ದಿನದಿಂದ ಮಧ್ಯಾಹ್ನದ ನಂತರ ಪ್ರತಿದಿನ ಮಳೆ ಆರಂಭವಾಗಿದ್ದು, ಮಳೆಯೊಂದಿಗೆ ಗುಡುಗು ಸಹಿತ ಭಾರೀ ಗಾಳಿ ಬೀಸುತ್ತಿದೆ. ವಾತಾವರಣ ಸಂಪೂರ್ಣ ಮಳೆಗಾಲದಂತೆ ಆಗಿದೆ. ಇದನ್ನೂ ಓದಿ. ನಾಯಿ ಬೆನ್ನತ್ತಿ ಬಂದು ವಾಟರ್ ಟ್ಯಾಂಕ್‍ಗೆ ಬಿತ್ತು ಚಿರತೆ 

ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಲಾಕ್‍ಡೌನ್ ನಡುವಿನ ಅಗತ್ಯ ಜನಸಂಚಾರಕ್ಕೆ ಕೊಂಚ ಸಮಸ್ಯೆಯಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅರಬ್ಬಿ ಸಮುದ್ರಕ್ಕಿಳಿಯುವ ಮೀನುಗಾರರು ಎಚ್ಚರಿಕೆವಹಿಸಬೇಕು. ಗಾಳಿಯ ಪ್ರಮಾಣ ಹೆಚ್ಚಿದ್ದಾಗ ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟಿದೆ.

Leave a Reply

Your email address will not be published.

Back to top button