Connect with us

Cinema

‘ಯಾವ ರೈತ ಫೋಟೋಶೂಟ್ ಮಾಡಿಸುತ್ತಾನೆ?’- ಸಲ್ಲು ಪೋಸ್ಟ್‌ಗೆ ನೆಟ್ಟಿಗರು ಟಾಂಗ್

Published

on

ಮುಂಬೈ: ರೈತ ಪರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕಿದ್ದ ಸಲ್ಮಾನ್‌ ಖಾನ್‌ ಈಗ ಅದೇ ಫೋಟೋದಿಂದ ಈಗ ಟ್ರೋಲ್‍ಗೆ ಒಳಗಾಗಿದ್ದಾರೆ.

ಕೊರೊನಾ ಭೀತಿಯಿಂದ ಚಿತ್ರರಂಗದ ಎಲ್ಲ ಚಟುವಟಿಕೆಗಳು ನಿಂತಿದ್ದು, ಸರ್ಕಾರ ಆದೇಶದಂತೆ ಮತ್ತೆ ಆರಂಭಗೊಳ್ಳುತ್ತಿವೆ. ಲಾಕ್‍ಡೌನ್ ವೇಳೆಯಿಂದಲೂ ತಮ್ಮ ತೋಟದ ಮನೆಯಲ್ಲೇ ಕಾಲಕಳೆಯುತ್ತಿರುವ ಸಲ್ಲು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರೈತರ ಪರವಾಗಿ ಫೋಟೋವೊಂದನ್ನು ಹಾಕಿದ್ದರು. ಈಗ ಇದೇ ಫೋಟೋವನ್ನು ಇಟ್ಟುಕೊಂಡು ನೆಟ್ಟೆಗರು ಸಲ್ಲು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

View this post on Instagram

Respect to all the farmers . .

A post shared by Salman Khan (@beingsalmankhan) on

ಮಂಗಳವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಫೋಟೋ ಹಾಕಿಕೊಂಡಿದ್ದ ಸಲ್ಮಾನ್ ಖಾನ್ ಅವರು, ಎಲ್ಲ ರೈತರನ್ನು ಗೌರವಿಸಿ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಸಲ್ಮಾನ್ ಅವರು, ಹೊಲದಲ್ಲಿ ಕುಳಿತ್ತಿದ್ದಾರೆ. ಜೊತೆಗೆ ಅವರ ಮೈತುಂಬ ಕೆಸರನ್ನು ಬಳಿಯಲಾಗಿದೆ. ಇದನ್ನು ಕಂಡ ನೆಟ್ಟಿಗರು ಯಾವ ರೈತ ಈ ರೀತಿ ಹೊಲದಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಾನೆ ಎಂದು ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಖಾನ್ ಅವರನ್ನು ಕಾಲೆಳೆದಿದ್ದಾರೆ.

ಜೊತೆಗೆ ಇನ್ನೂ ಕೆಲವರು, ಫೋಟೋವನ್ನು ಗಮನಿಸಿದಾಗ ಸಲ್ಲು ಕೈಗಳು ಕೆಸರಗಿಲ್ಲ. ಕೇವಲ ಅವರ ತೋಳು ಮತ್ತು ದೇಹಕ್ಕೆ ಮಾತ್ರ ಕೆಸರು ಆಗಿದೆ. ಇದರ ಅರ್ಥ ಕೆಸರನ್ನು ಸಹ ಅವರು ಬಳಿದುಕೊಂಡಿಲ್ಲ. ಫೋಟೋಶೂಟ್ ಮಾಡಿಸಲು ಯಾರೋ ಬಳಿದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ ನಾನು ಬಹಳ ಜನ ರೈತರನ್ನು ನೋಡಿದ್ದೇನೆ. ಆದರೆ ಯಾವ ರೈತರು ತನ್ನ ಮುಖಕ್ಕೆ ಕೆಸರು ಬಳಿದುಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಲಾಕ್‍ಡೌನ್ ಸಮಯದಿಂದಲೂ ಮುಂಬೈನಲ್ಲಿರುವ ತನ್ನ ಪನ್ವೆಲ್ ತೋಟದ ಮನೆಯಲ್ಲಿ ತಂಗಿರುವ ಸಲ್ಲು, ಅಲ್ಲಿ ಕುದುರೆಗೆ ಹುಲ್ಲು ತಿನ್ನಿಸಿ ತಾನು ತಿಂದು ಸುದ್ದಿಯಾಗಿದ್ದರು. ಜೊತೆಗೆ ಅದೇ ತೋಟದ ಮನೆಯಲ್ಲಿ ವಿದೇಶಿ ಗೆಳತಿ ಜೊತೆ ಸಿಕ್ಕಿಬಿದ್ದಿದ್ದರು. ಈ ಹಿಂದೆಯೂ ಕೂಡ ರೈತ ಪರವಾಗಿ ಇನ್‍ಸ್ಟಾ ಪೋಸ್ಟ್ ಹಾಕಿದ್ದ ಸಲ್ಮಾನ್‌ ಖಾನ್‌,ನಾವು ತಿನ್ನುವ ಪ್ರತಿಯೊಂದು ಅನ್ನದ ಮೇಲೆ ನಮ್ಮ ಹೆಸರು ಬರೆದಿರುತ್ತದೆ. ಜೈ ಜವಾನ್ ಜೈ ಕಿಸಾನ್ ಎಂದು ಬರೆದುಕೊಂಡಿದ್ದರು. ಜೊತೆಗೆ ಭತ್ತ ನಾಟಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

View this post on Instagram

Breakfast with my love…

A post shared by Salman Khan (@beingsalmankhan) on

ಸಲ್ಮಾನ್ ಖಾನ್ ಲಾಕ್‍ಡೌನ್‍ಗೂ ಮುನ್ನ ಕೊನೆಯ ಬಾರಿಗೆ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ 13ರ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಲಾಕ್‍ಡೌನ್‍ಗೂ ಮುಂಚೆ ಸಲ್ಲು ನಟನೆಯ ದಬಾಂಗ್-3 ಚಿತ್ರ ಬಿಡುಗಡೆಯಾಗಿತ್ತು. ಸದ್ಯ ಸಲ್ಲು ನಟನೆಯ ‘ರಾಧೆ ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಎಂಬ ಸಿನಿಮಾ ಬಿಡುಗಡೆಗೆ ತಯಾರಗಿದೆ. ಇದರಲ್ಲಿ ಸಲ್ಲು ಜೊತೆ ನಟಿ ದಿಶಾ ಪಟಾನಿ, ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ನಟಿಸಿದ್ದಾರೆ.

Click to comment

Leave a Reply

Your email address will not be published. Required fields are marked *