DistrictsKarnatakaLatestMain PostMysuru

ಮೈತ್ರಿ ಸರ್ಕಾರಕ್ಕೆ ಮೊದಲು ಆಹ್ವಾನ ಇಟ್ಟಿದ್ದು ಡಿಕೆಶಿ: ಸಾ.ರಾ. ಮಹೇಶ್

– ಮೈಸೂರು ಮೇಯರ್ ರಾಜಕೀಯ ಜಿದ್ದಾಜಿದ್ದಿಗೆ ಸ್ಫೋಟಕ ಟ್ವಿಸ್ಟ್

ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಳಿ ಮಾತನಾಡಿ ಮೈತ್ರಿ ಸರ್ಕಾರಕ್ಕೆ ಮನವಿ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿನೂ ಬೇಡ, ಕಾಂಗ್ರೆಸ್ ಕೂಡ ಬೇಡ ಅಂತಾ ಅಂತಿಮವಾಗಿ ನಿರ್ಧಾರ ಮಾಡಿ ಅದನ್ನು ತನ್ವೀರ್ ಸೇಠ್‍ಗೆ ತಿಳಿಸಿದ್ದೇವು. ಮಧ್ಯರಾತ್ರಿ 12 ಗಂಟೆ 41 ನಿಮಿಷಕ್ಕೆ ತನ್ವೀರ್ ಸೇಠ್ ಕರೆ ಮಾಡಿದ್ದರು. ನಾನು ರೀಸೀವ್ ಮಾಡಿರಲಿಲ್ಲ. ಆಗ ಮೇಸೇಜ್ ಹಾಕಿದ್ದರು ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಚುನಾವಣೆ ಗೆ ಗೈರು ಆಗುತ್ತಾರೆ ಎಂದು ಮೆಸೇಜ್ ಹಾಕಿದ್ದರು. ಚುನಾವಣೆ ದಿನ ಬೆಳಗ್ಗೆ 11 ಗಂಟೆಗೆ ತನ್ವೀರ್ ಸೇಠ್ ಕರೆ ಮಾಡಿ ಮೇಯರ್ ಸ್ಥಾನ ನೀವೇ ಇಟ್ಕೊಳ್ಳಿ, ಉಪ ಮೇಯರ್ ನಮಗೆ ಕೊಡಿ ಅಂತಾ ತನ್ವೀರ್ ಸೇಠ್ ಹೇಳಿದ್ದರು ನಾವು ಒಪ್ಪಿರಲಿಲ್ಲ ಎಂದರು.

ಅದೇ ದಿನ 11.30 ಕ್ಕೆ ಡಿ.ಕೆ.ಶಿವಕುಮಾರ್ ಕರೆ ಮಾಡಿ ಮೈತ್ರಿಗೆ ಬನ್ನಿ ಅಂತಾ ಕೇಳಿದ್ದರು. 11.45 ಕ್ಕೆ ನಮ್ಮ ಇಬ್ಬರು ಶಾಸಕರು ಚುನಾವಣೆಗೆ ಗೈರು ಆಗೋದು ಖಚಿತವಾಯಿತು ಆಗ, ತನ್ವೀರ್ ಸೇಠ್ ಮತ್ತೆ ಕರೆ ಮಾಡಿ ಕೇಳಿದ್ದರು. ಆಗ ನಾವು ನಮ್ಮ ಸದಸ್ಯರ ತೀರ್ಮಾನಕ್ಕೆ ಬಿಟ್ಟೆವು. ಸ್ವತಂತ್ರವಾಗಿ ನಮ್ಮ ಶಕ್ತಿ ತೋರಿಸಲು ನಿರ್ಧಾರ ಮಾಡಿದ್ದೇವು.ಡಿ.ಕೆ. ಶಿವಕುಮಾರ್ ಫೋನ್ ಮಾಡುತ್ತಿದ್ದಾರೆ ಕಾಲ್ ಪಿಕ್ ಮಾಡಿ ಅಂತಾ ತನ್ವೀರ್ ಸೇಠ್ ನನಗೆ ಮೆಸೇಜ್ ಮಾಡಿದ್ದರು ಎಂದಿದ್ದಾರೆ.

ನನ್ನ ಫೋನ್ ಅಲ್ಲೆ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಜೊತೆ ಮಾತಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖುದ್ದಾಗಿ ನನ್ನ ಜೊತೆ ಮಾತಾಡಿದ್ದರು. ಮೇಯರ್ ಸ್ಥಾನ ಕಾಂಗ್ರೆಸ್ ಗೆ ಬಿಟ್ಟು ಕೊಡಿ ಅಂತಾ ಕೇಳಿದ್ದರು. ಆದರೂ ನಾವು ಆ ಕ್ಷಣಕ್ಕೂ ಮೈತ್ರಿ ಬೇಡ ಅಂತಾ ನಿರ್ಧರಿಸಿದ್ದೇವು ಎಂದಿದ್ದಾರೆ.

Leave a Reply

Your email address will not be published. Required fields are marked *

Back to top button