ನವದೆಹಲಿ: ಇಂದಿನಿಂದ ಮುಂಬೈ ಮತ್ತು ಚಂಡೀಗಢದಲ್ಲಿ ಕೊರೊನಾ ವೈರಸ್ ನಿಗ್ರಹ ಕೋವಿಶೀಲ್ಡ್ ವ್ಯಾಕ್ಸಿನ್ ಪರೀಕ್ಷೆಗೆ ಒಳಪಡಲಿದೆ. ಮುಂಬೈನ KEM ಆಸ್ಪತ್ರೆ ಮತ್ತು ಚಂಡೀಗಢದ PGIMERನಲ್ಲಿ ಮಾನವರ ಮೇಲೆ ಪ್ರಯೋಗ ನಡೆಯಲಿದೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಹೇಳಿದೆ.
Advertisement
ಪುಣೆಯಲ್ಲಿ ಈಗಾಗಲೇ ಮೂರನೇ ಹಂತದ ಪರೀಕ್ಷೆ ಆರಂಭವಾಗಿದ್ದು, ಅದರ ಭಾಗವಾಗಿ ಚಂಡೀಗಢ ಮತ್ತು ಮುಂಬೈನಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಚಂಡೀಗಢದಲ್ಲಿ 57, 33, 26 ವಯಸ್ಸಿನ ಮೂವರು ಸ್ವಯಂ ಸೇವಕರ ಮೇಲೆ ಇಂದು ಪ್ರಯೋಗ ನಡೆಯಲಿದೆ.
Advertisement
ಈವರೆಗೂ 18 ಮಂದಿ ಸ್ವಯಂಸೇವಕರು ನೊಂದಣಿಯಾಗಿದ್ದಾರೆ. 100 ಸ್ವಯಂ ಸೇವಕರ ಮೇಲೆ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು PGIMER ಮುಖ್ಯಸ್ಥ ಫ್ರೋ.ಜಗತ್ ರಾಮ್ ಹೇಳಿದ್ದಾರೆ.
Advertisement
Advertisement
ಮುಂಬೈನ KEM ನಲ್ಲಿ ಇಂದು 13 ಮಂದಿ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಯಲಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರಯೋಗ ನಡೆಯಲಿದೆ ಎಂದು ಡಾ. ಹೇಮಂತ್ ದೇಶಮುಖ್ ತಿಳಿಸಿದ್ದಾರೆ.
ಬ್ರಿಟನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ, ಆಸ್ಟ್ರಾಜೆನಿಕಾ ಫಾರ್ಮಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಪ್ರಯೋಗಕ್ಕೆ ಒಳಪಡಿಸಿದ್ದು, ಅಂತಿಮ ಹಂತದ ಪರೀಕ್ಷೆಗಳನ್ನು ವಿಸ್ತರಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಫಲಿತಾಂಶ ನಿರೀಕ್ಷಿಸಿದೆ.
https://twitter.com/HindustanNews10/status/1309700162722435073