– ಅಮಾಯಕರನ್ನು ಬಂಧಿಸೋದು ಸರಿಯಲ್ಲ
– ಭಾರತವನ್ನು ಇಡೀ ವಿಶ್ವ ನೋಡಲು ರಾಜೀವ್ ಗಾಂಧಿ ಕಾರಣ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಗಲಭೆಯಲ್ಲಿ ನೀವು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದೀರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಹರಿಹಾಯ್ದರು.
Advertisement
ದೇವರಾಜ್ ಅರಸರ ಜನ್ಮದಿನದಂದೇ ‘ಬಿಜೆಪಿ ವಿರುದ್ಧ ಕಾಂಗ್ರೆಸ್ ಜನಧ್ವನಿ’ ಹೆಸರಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ. ಈ ವೇಳೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾತನಾಡಿದ ಡಿಕೆಶಿ, ಮಿಸ್ಟರ್ ಪೊಲೀಸ್ ಕಮೀಷನರ್ ಬೆಂಗಳೂರಿನಲ್ಲಿ ನಡೆದ ಗಭೆಯಲ್ಲಿ ನೀವು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದೀರಿ. ಕಾಂಗ್ರೆಸ್ ನಾಯಕರನ್ನು ಫಿಕ್ಸ್ ಮಾಡುವ ಕೆಲಸ ಮಾಡುತ್ತಿದ್ದೀರಿ. ಬಿಜೆಪಿ ಸಚಿವರಿಂದ ಇನ್ಫ್ಲೂಯೆನ್ಸ್ ಆಗಿ ಕೆಲಸ ಮಾಡುತ್ತಿದ್ದೀರಿ. ಪೊಲೀಸರು ಹೀಗೆ ಪಕ್ಷಪಾತ ಮಾಡಿದರೆ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂರಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.
Advertisement
Advertisement
ಕಾಂಗ್ರೆಸ್ ಪಾರ್ಟಿಯನ್ನ ಫಿಕ್ಸ್ ಮಾಡಬೇಕು ಅಂತ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ವಿರುದ್ಧ ಅಲ್ಲ ಪೊಲೀಸರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ಮಿಸ್ಟರ್ ಕಮಿಷನರ್ ಬಿ ಕೇರ್ ಪುಲ್. ಇದನ್ನ ಮನವಿಯಾದರೂ ಅನ್ಕೊಳ್ಳಿ ಎಚ್ಚರಿಕೆ ಅಂತ ಆದರೂ ಅಂದುಕೊಳ್ಳಿ. ಗಲಭೆಯನ್ನ ಪೊಲೀಸರು ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್ಪಂತ್ ತಿರುಗೇಟು
Advertisement
ಕಾಂಗ್ರೆಸ್ ಪಕ್ಷದ ನಾಯಕರು ಇನ್ನೂ ಸತ್ತಿಲ್ಲ. ನಿಮ್ಮ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಮಂತ್ರಿಗಳ ಪ್ರಭಾವದಿಂದ ಪೊಲೀಸರು ಕಾಂಗ್ರೆಸ್ ಪಕ್ಷವನ್ನ ಫಿಕ್ಸ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಅಮಾಯಕರನ್ನ ಬಂಧಿಸೋದು ಸರಿ ಇಲ್ಲ. ನಿಮ್ಮ ತನಿಖಾ ಸಂಸ್ಥೆ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ರಾಜ್ಯದ 25 ಸಂಸದರು ಎಲ್ಲಿ ಹೋಗಿದ್ದಾರೆ. ಪ್ರಧಾನಿಗಳ ಬಗ್ಗೆ ನಿಯೋಗ ಕರೆದುಕೊಂಡು ಹೋಗಲಿ. ಕಳೆದ ವರ್ಷದ ನೆರೆ ಪರಿಹಾರ ಕೇಳಿದಷ್ಟು ಬಂದಿಲ್ಲ. ಈ ಬಾರಿಯಾದರೂ ಬಿಜೆಪಿಯ 25 ಸಂಸದರು ಪ್ರಧಾನಿಗೆ ಕೇಳಲಿ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನು ಸಿಕ್ಕಿಲ್ಲ. ಚಾಲಕರಿಗೆ 5000 ರೂಪಾಯಿ ಪರಿಹಾರ ಇನ್ನೂ ಬಂದಿಲ್ಲ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ಯಾರಿಗೆ ಕೊಟ್ಟಿದ್ದೀರಾ ಅಂತ ಮಾಹಿತಿ ನೀಡಲಿ. ಯಾರ್ಯಾರಿಗೆ ಹಣ ಕೊಟ್ಟಿದ್ದೀರಾ ಅಂತ ದಾಖಲೆ ನೀಡಲಿ. ಕೊರೊನಾದಿಂದ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದು ಡಿಕೆಶಿ ಕಿಡಿಕಾರಿದರು.
ಇಂದು ನಾವು ಎಲ್ಲರೂ ಕಾರ್ಯಕರ್ತರು. ಇಂದು ಬಹಳ ಪವಿತ್ರವಾದ ದಿನ. ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ಕಾಲೇಜು ವಿದ್ಯಾರ್ಥಿ ಆಗಿದ್ದೆ. ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಇಬ್ಬರು ದೊಡ್ಡ ನಾಯಕರು. ದೇಶದಲ್ಲಿ ಭವಿಷ್ಯಕ್ಕಾಗಿ ಹೊಸ ನಾಯಕರನ್ನು ತಯಾರು ಮಾಡಬೇಕಿದೆ ಎಂದು ರಾಜೀವ್ ಗಾಂಧಿ ಅಂದು ಹೇಳಿದ್ದರು. ಸಂಸತ್ತು ಮತ್ತು ಪಂಚಾಯತ್ ಮಧ್ಯದಲ್ಲೂ ಕೂಡ ನಾಯಕರು ಇರಬೇಕು. ಹಾಗಾಗಿ ಈ ಇಬ್ಬರು ನಾಯಕರು ಸಾಕಷ್ಟು ನಾಯಕರನ್ನು ತಯಾರು ಮಾಡಿದ್ರು. ಅವರುಗಳಲ್ಲಿ ನಾನು ಒಬ್ಬ ಎಂದರು.
ಋಣಮುಕ್ತ, ಭೂ ಸುಧಾರಣಾ ಕಾಯ್ದೆಗಳ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ದೇವರಾಜ್ ಅರಸ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
ಸಮಾಜದ ಶೋಷಿತ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಿದ ಈ ಮಹಾನ್ ಮುತ್ಸದ್ಧಿಯ ಬದುಕು ನಮಗೆಲ್ಲಾ ಮಾದರಿ. pic.twitter.com/H5wP044ZOG
— DK Shivakumar (@DKShivakumar) August 20, 2020
ದೇವರಾಜ ಅರಸು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದ್ರು. ಮನೆ ಇಲ್ಲದೆ ಬಡವರಿಗೆ ಮನೆ ಕೊಟ್ಟ ಕೆಲಸ ಕಾಂಗ್ರೆಸ್ ಮಾಡಿದೆ. ರಾಜೀವ್ ಗಾಂಧಿ ಆಲೋಚನೆ ತುಂಬಾ ದೊಡ್ಡದಾಗಿದ್ದವು. ಮಾಹಿತಿ ತಂತ್ರಜ್ಞಾನ ರಾಜೀವ್ ಗಾಂಧಿ ಕೊಡುಗೆಯಾಗಿದೆ. ಭಾರತವನ್ನು ಇಂದು ಇಡೀ ವಿಶ್ವ ನೋಡ್ತಾಯಿದೆ ಅಂದ್ರೆ ಅದಕ್ಕೆ ಕಾರಣ ರಾಜೀವ್ ಗಾಂಧಿ ಎಂದು ತಿಳಿಸಿದರು.
ದೇಶದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ, ಅವರು ಹಾಕಿ ಕೊಟ್ಟ ಅಡಿಪಾಯ ಇಡೀ ವಿಶ್ವ ಭಾರತವನ್ನ ನೋಡುತ್ತಿದೆ. ನಮ್ಮದು ಜನಧ್ವನಿ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಧ್ವನಿಯಾಗಿದೆ ಎಂದರು. ಇದನ್ನೂ ಓದಿ: ಎಸ್ಡಿಪಿಐ ನಿಷೇಧ ಆಗುತ್ತಾ – ಕ್ಯಾಬಿನೆಟ್ ಸಭೆಯ ಇನ್ಸೈಡ್ ಸುದ್ದಿ
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.