ಚೆನ್ನೈ: ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದೆ.
Advertisement
ಧೋನಿ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾದರೆ, ವಿಜಯ್ ತಮಿಳು ಚಿತ್ರರಂಗದ ದಿಗ್ಗಜ ನಟ. ಇವರಿಬ್ಬರು ಕೂಡ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಾಸ್ಟರ್ ಮತ್ತು ಬ್ಲಾಸ್ಟರ್ ಜೊತೆಗೆ ಎಂದು ಬರೆದುಕೊಂಡಿದೆ.
Advertisement
Advertisement
2021ರ ಜನವರಿಯಲ್ಲಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಧೋನಿ ಕ್ರಿಕೆಟ್ನಲ್ಲಿ ಹೊಡೆಯುವ ಆಕರ್ಷಕ ಹೊಡೆತಗಳಿಗಾಗಿ ಅವರ ಅಭಿಮಾನಿಗಳು ಬ್ಲಾಸ್ಟರ್ ಎಂದು ಪ್ರೀತಿಯಿಂದ ಕರೆದಿದ್ದಾರೆ. ಇದೀಗ ಇಬ್ಬರು ಕೂಡ ಒಟ್ಟಿಗೆ ಫೋಟೋಗೆ ಫೋಸ್ ನೀಡಿದ್ದಾರೆ.
Advertisement
View this post on Instagram
ವಿಜಯ್ ‘ಬೀಸ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಆಕ್ಷ್ಯನ್ ಥ್ರಿಲ್ಲರ್ ಚಿತ್ರದ ಚಿತ್ರೀಕರಣ ಚಿನ್ನೈನ ಗೋಕುಲಂ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ಅದೇ ಸ್ಟುಡಿಯೋದಲ್ಲಿ ಧೋನಿ ಜಾಹೀರಾತು ಒಂದರ ಶೂಟಿಂಗ್ಗಾಗಿ ಹೋಗಿದ್ದರು. ಈ ವೇಳೆ ಇಬ್ಬರು ಪರಸ್ಪರ ಭೇಟಿ ಆಗಿದ್ದಾರೆ ಧೋನಿ, ವಿಜಯ್ ಜೊತೆ ಕೆಲಹೊತ್ತು ಕಾಲ ಕಳೆದು ಬಳಿಕ ತೆರಳಿದ್ದರು. ಈ ಸಂದರ್ಭ ತೆಗೆಸಿಕೊಂಡ ಫೋಟೋ ಇದೀಗ ಸಖತ್ ಸುದ್ದಿ ಮಾಡುತ್ತಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಲೈಕ್ ಬಂದಿದೆ.
More pics of @actorvijay and @msdhoni. The meeting of two cool-headed superstars! #ThalapathyVijay #MSDhoni pic.twitter.com/Zh72WD4VAy
— George (@VijayIsMyLife) August 12, 2021
ಐಪಿಎಲ್ನಲ್ಲಿ ಚೆನ್ನೈ ತಂಡದ ಪರ ಧೋನಿ ನಾಯಕನಾಗಿ ಆಡುತ್ತಿದ್ದಾರೆ. ಈ ಹಿಂದೆ 2008ರಲ್ಲಿ ಚೆನ್ನೈ ತಂಡದ ರಾಯಭಾರಿಯಾಗಿ ವಿಜಯ್ ಧೋನಿ ಜೊತೆಗೆ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಇದೀಗ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ಗೂ ಮುನ್ನ ಡ್ಯಾಶಿಂಗ್ ಲುಕ್ನಲ್ಲಿ ಕಾಣಿಸಿಕೊಂಡ ಧೋನಿ
ಧೋನಿ ಸೆಪ್ಟೆಂಬರ್ ನಲ್ಲಿ ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್ಗಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೆ, ವಿಜಯ್ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.