– ದಂಡ ವಿಧಿಸಿದ ಪಾಲಿಕೆ ಸಿಬ್ಬಂದಿಗೆ ಖಾಕಿ ಅವಾಜ್
ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಹೀಗಿದ್ದರೂ ಕೆಲವರು ಮಾಸ್ಕ್ ಧರಿಸಿದರೇ, ಇನ್ನು ಕೆಲವು ಮಂದಿ ಮಾಸ್ಕ್ ಧರಿಸದೇ ನಮಗೆ ಕೊರೋನಾ ತಗುಲುವುದಿಲ್ಲ ಎಂಬ ಭಾವನೆಯಲ್ಲಿದ್ದಾರೆ.
ಶಿವಮೊಗ್ಗದಲ್ಲಿ ಅಧಿಕಾರಿಗಳು ಈ ಮೊದಲು ಜಾಗೃತಿ ಮೂಢಿಸುವ ಕೆಲಸ ಮಾಡಿದರು. ನಂತರ ಎಚ್ಚರಿಕೆ ನೀಡಿದರು. ಇದ್ಯಾವುದಕ್ಕೂ ಜನರು ಬಗ್ಗದಿದ್ದಾಗ ಇದೀಗ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಲು ಮುಂದಾಗಿದ್ದಾರೆ. ಇಂದು ನಗರದ ಗೋಪಿ ವೃತ್ತದಲ್ಲಿ ಪಾಲಿಕೆ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದರು. ಅದೇ ಮಾರ್ಗವಾಗಿ ಬೈಕ್ನಲ್ಲಿ ಬಂದ ಪೊಲೀಸ್ ಒಬ್ಬರು ಸಹ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಪಾಲಿಕೆ ಸಿಬ್ಬಂದಿ ಬೈಕ್ ತಡೆದು ನಿಲ್ಲಿಸಿ ಮಾಸ್ಕ್ ಧರಿಸದ ಪೊಲೀಸ್ಗೂ 200 ರೂ ದಂಡ ವಿಧಿಸಿದ್ದಾರೆ.
Advertisement
Advertisement
ಪಾಲಿಕೆ ಸಿಬ್ಬಂದಿ ದಂಡ ವಿಧಿಸಿದ್ದಕ್ಕೆ ಕೆರಳಿದ ಪೊಲೀಸ್, ನೀವು ನಮ್ಮ ಸ್ಟೇಷನ್ಗೆ ಬನ್ನಿ ಆಗ ನಿಮ್ಮನ್ನು ನೋಡಿಕೊಳ್ಳುತ್ತೀನಿ ಎಂದು ಆವಾಜ್ ಹಾಕಿದ್ದಾನೆ. ಈ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸ್ ನಡುವೆ ಮಾತಿನ ಚಕಮಖಿ ಸಹ ನಡೆಯಿತು. ನಂತರ ಸಾರ್ವಜನಿಕರು ಇಬ್ಬರನ್ನು ಸಮಾಧಾನ ಪಡಿಸಿ ಕಳುಹಿಸಿದರು.