ಲಕ್ನೋ: ಮಹಿಳೆಯರ ಒಳ ಉಡುಪು ಕದ್ದು ವಿಕೃತಿ ಮೆರೆಯುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ನಲ್ಲಿದೆ.
Advertisement
ಮಹಿಳೆಯರು ತೊಳೆದು ಹೊರಗಡೆ ಒಣ ಹಾಕಿದ್ದ ಒಳ ಉಡುಪುಗಳನ್ನು ಈ ಖದೀಮರು ಕದ್ದು ಪರಾರಿಯಾಗುತ್ತಿದ್ದರು. ಈ ಘಟನೆಯನ್ನು ವ್ಯಕ್ತಿ ರೆಕಾರ್ಡ್ ಮಾಡಿದ್ದರಿ ಅಲ್ಲದೆ ಸಿಸಿಟಿವಿ ಕ್ಯಾಮೆರಾದಲ್ಲಿ ಸಹ ಸೆರೆಯಾಗಿತ್ತು. ಹೊರಗಡೆ ಒಣ ಹಾಕಿದ ವೇಳೆ ಇಬ್ಬರು ಖದೀಮರು ಕದ್ದು, ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್ ಪೊಲೀಸರು ಮೊಹ್ದ್ ರೋಮಿನ್ ಹಾಗೂ ಮೊಹದ್ ಅಬ್ದುಲ್ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಜಸ್ಟ್ ಫನ್ಗಾಗಿ ಮಹಿಳೆಯರ ಒಳ ಉಡುಪು ಕದ್ದಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ರೋಮಿನ್ ಹಾಗೂ ಅಬ್ದುಲ್ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ) ಹಾಗೂ 509(ಮಹಿಳೆಯರ ಗೌರವಕ್ಕೆ ಧಕ್ಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.
Advertisement
ಸಂಜಯ್ ಚೌಧರಿ ಅವರು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಾ.14ರಂದು ಈ ಬಗ್ಗೆ ದೂರು ನೀಡಿದ್ದು, ನನ್ನ ಅಪ್ರಾಪ್ತ ಮಗಳ ಒಳ ಉಡುಪುಗಳನ್ನು ಒಣ ಹಾಕಿದಾಗ ಈ ಇಬ್ಬರು ಕದಿಯುತ್ತಿರುವುದನ್ನು ವೀಡಿಯೋ ರೆಕಾರ್ಡ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಅಪನಂಬಿಕೆ, ಹಲವು ಅತೀಂದ್ರಿಯ ಅಭ್ಯಾಸವು ಮಹಿಳೆಯ ಒಳ ಉಡುಪುಗಳನ್ನು ಕದಿಯುವ ಹಿಂದಿನ ಉದೇಶವಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಪ್ಯಾಂಟಿ ಚೋರ್ ಅಬ್ದುಲ್ ಹ್ಯಾಷ್ ಟ್ಯಾಗ್ನೊಂದಿಗೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಹಲವು ರೀತಿಯ ಮೀಮ್ಸ್ ಹಾಗೂ ಜಿಫ್ಗಳೊಂದಿಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಸಿದ್ದಾರೆ.