ಬೆಂಗಳೂರು: ನಟ ಕೋಮಲ್ ಬಳಿಕ ಜಗ್ಗೇಶ್ರವರ ಬಾವಮೈದುನನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಾವಮೈದುನನಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ನಟ ಜಗ್ಗೇಶ್ ಹರಸಾಹಸ ಪಟ್ಟಿದ್ದಾರೆ. ಈ ಕುರಿತಾದ ಅನುಭವವನ್ನು ಟ್ವೀಟ್ ಮಾಡುವಾಗ ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ಬರೆದಿದ್ದಾರೆ.
View this post on Instagram
Advertisement
23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿ ಸಾಕಪ್ಪಾ ದೇವರೇ.. ಎನ್ನುವಷ್ಟರಲ್ಲಿ ನನ್ನ ಬಾವಮೈದುನ ಸೀರಿಯಸ್ ಆದ ಸುದ್ದಿ ಬಂತು. ರಾತ್ರಿ 11ಕ್ಕೆ. ಸರಿ ರಾತ್ರಿ ಅವನ ಕ್ಷೇಮದ ಜಾಗಕ್ಕೆ ಓಡಾಟ. ರಾಯರ ದಯೇ.. ನಾರಾಯಣ ಆಸ್ಪತ್ರೆಯಲ್ಲಿ ಕರುಣೆ ತೋರಿದರು. ಧನ್ಯವಾದ. ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
Advertisement
23ಜನರ ಕೊರೋನ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿ ಸಾಕಪ್ಪ ದೇವರೆ ಎನ್ನುವರಷ್ಟರಲ್ಲಿ ನನ್ನ ಭಾವಮೈಧುನ ಸೀರಿಯಸ್ ಆದ ಸುದ್ಧಿಬಂತು ರಾತ್ರಿ11ಕ್ಕೆ!ಸರಿರಾತ್ರಿ ಅವನಕ್ಷೇಮದ ಜಾಗಕ್ಕೆ ಓಡಾಟ!ರಾಯರದಯೇ! #narayanhospital #malleshwara ದಲ್ಲಿ dr.Narayanswamy dr.jagdish ಕರುಣೆತೋರಿದರು ಧನ್ಯವಾದ.
ಮನೆಗೆ ಹಿರಿಯನಾಗಿ ಹುಟ್ಟುವುದೆ ಕರ್ಮ! pic.twitter.com/5OVBM5BKLV
— ನವರಸನಾಯಕ ಜಗ್ಗೇಶ್ (@Jaggesh2) May 4, 2021
Advertisement
ತಮ್ಮ ಸಹೋದರ, ನಟ ಕೋಮಲ್ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರ ಬಗ್ಗೆ ನಟ ಜಗ್ಗೇಶ್ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದರು. ರಾಯರು ಬೃಂದಾವನದಿಂದ ಎದ್ದು ಬಂದು ಪಕ್ಕ ನಿಂತು ಅವನನ್ನು ಉಳಿಸಿಬಿಟ್ಟರು ಕೋಮಲ್ ಈಗ ಸೇಫ್ ಎಂದು ಜಗ್ಗೇಶ್ ಹೇಳಿದ್ದರು.
Advertisement
ಕೊರೊನಾ ಸಂಕಷ್ಟಕ್ಕೆ ಮನೆಯಲ್ಲಿ ಒಬ್ಬರು ಸಿಲುಕಿದರೆ ಮನೆ ಮಂದಿಯೆಲ್ಲಾ ನರಕ ನೋಡುವಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್ ಬರೆದುಕೊಂಡಿದ್ದರು. ಇದೀಗ ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.