ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಶಿಸ್ತು ಉಲ್ಲಂಘಿಸಿದ್ದಾರೆ. ಮತ್ತೊಮ್ಮೆ ಅಶಿಸ್ತು ಪ್ರದರ್ಶಿಸಿದರೆ ಪಂದ್ಯದಿಂದ ನಿಷೇಧ ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 33 ರನ್ ಗಳಿಸಿ ಕೊಹ್ಲಿ ಔಟಾದರು. ಈ ವೇಳೆ ಸಿಟ್ಟಿನಲ್ಲಿ ಪೆವಿಲಿಯನ್ ಕಡೆ ನಡೆದ ಕೊಹ್ಲಿ ಬೌಂಡರಿ ಗೆರೆ ಬಳಿಯ ಹಗ್ಗಕ್ಕೆ ಹೊಡೆದು ಬಳಿಕ ಆರ್ಸಿಬಿ ಡಗೌಟ್ನಲ್ಲಿದ್ದ ಚಯರ್ ಮೇಲೆ ಬ್ಯಾಟ್ ಬೀಸಿದ್ದರು.
Advertisement
Advertisement
ಕೊಹ್ಲಿ ಈ ವರ್ತನೆ ಐಪಿಎಲ್ ನೀತಿ ಸಂಹಿತೆಯ 2.2ರ ಲೆವೆಲ್ 1 ಉಲ್ಲಂಘನೆಯಾಗಿದೆ. ಲೆವೆಲ್ 1 ಉಲ್ಲಂಘನೆಯಾಗಿರುವ ಕಾರಣ ಸದ್ಯಕ್ಕೆ ಕೊಹ್ಲಿ ಪಾರಾಗಿದ್ದರೂ ಮತ್ತೊಮ್ಮೆ ಮರುಕಳಿಸಿದರೆ ಪಂದ್ಯದ ಶುಲ್ಕದ ಶೇ.50 ರಿಂದ ಶೇ.100 ರಷ್ಟು ದಂಡ ಅಥವಾ 2 ರಿಂದ 4 ಪಂದ್ಯಕ್ಕೆ ನಿಷೇಧ ಹೇರಬಹುದಾಗಿದೆ.
Advertisement
ಕಳೆದ 4 ವರ್ಷಗಳಿಂದ ಕೊಹ್ಲಿ ಹೈದರಾಬಾದ್ ವಿರುದ್ಧ ರನ್ ಬರ ಎದುರಿಸುತ್ತಿದ್ದು ಯಾವುದೇ ಅರ್ಧಶತಕ ಹೊಡೆದಿಲ್ಲ. ಹೈದರಾಬಾದ್ ವಿರುದ್ಧದ ಕಳೆದ 6 ಇನ್ನಿಂಗ್ಸ್ನಲ್ಲಿ ಕೊಹ್ಲಿ 12, 3, 16, 14, 7, 6 ರನ್ ಹೊಡೆದಿದ್ದಾರೆ.