ಬೆಂಗಳೂರು: ಕೊರೊನಾ ಸಮಯದಲ್ಲಿ ಶಿಕ್ಷಣ ಇಲಾಖೆಯಿಂದ ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತಿದೆ. ಸ್ಕೂಲ್ ಓಪನ್, ವಿದ್ಯಾಗಮ ಬಳಿಕ ಈಗ ಪಿಯುಸಿ ಪರೀಕ್ಷೆಯಲ್ಲಿ ಎಡವಟ್ಟು ಮಾಡಿಕೊಂಡಿದೆ. ಹೀಗಾಗಿ ಪಬ್ಲಿಕ್ ಟಿವಿ ಮತ್ತೊಮ್ಮೆ ವಿದ್ಯಾರ್ಥಿಗಳ ಪರ ಧ್ವನಿ ಎತ್ತುತ್ತಿದೆ.
ಕೊರೊನಾ ಸಮಯದಲ್ಲಿ ಶಿಕ್ಷಣ ಇಲಾಖೆ ಮಕ್ಕಳ ಜೀವದ ಜೊತೆ ಮತ್ತೆ ಚೆಲ್ಲಾಟ ಆಡುತ್ತಿದೆ. ಕೊರೊನಾ ರೌದ್ರತೆಯ ನಡುವೆ ಫೇಲ್ ಆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪಿಯುಸಿ ಬೋರ್ಡ್ ಪೂರಕ ಪರೀಕ್ಷೆ ನಡೆಸಲು ಹೊರಟಿದೆ. ತಾನೇ ಹೊರಡಿಸಿದ್ದ ಆದೇಶವನ್ನ ಮರೆತು ಪರೀಕ್ಷೆ ಮಾಡುವಂತೆ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ.
Advertisement
Advertisement
ಅಕ್ಟೋಬರ್ 20ರ ಒಳಗೆ ಪರೀಕ್ಷೆ ಮುಗಿಸುವಂತೆ ಸುತ್ತೋಲೆ ಹೊರಡಿಸಿದೆ. ಅಸಲಿಗೆ ಪೂರಕ ಪರೀಕ್ಷೆ ಬೇಡ ಅಂತ ಪಿಯುಸಿ ಬೋರ್ಡ್ ಮೊದಲು ಆದೇಶ ಹೊರಡಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಪಾಸ್ ಆಗಲು ಬೇಕಾದ ಅಂಕಗಳನ್ನ ನೀಡಿ ಪಾಸ್ ಮಾಡುವಂತೆ ಕಳೆದ ಜುಲೈ ನಲ್ಲಿ ಆದೇಶ ಹೊರಡಿಸಿತ್ತು. ಅಲ್ಲದೆ ಕಾಲೇಜು ಪ್ರಾರಂಭ ಆದ ನಂತರ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಮಾಡಿ ಅಂತ ಸೂಚನೆ ಕೊಟ್ಟಿತ್ತು. ಪಿಯು ಬೋರ್ಡ್ ಆದೇಶದ ಹಿನ್ನೆಲೆಯಲ್ಲಿ ಕಾಲೇಜು ಹಂತದಲ್ಲೆ ಅಂಕ ನೀಡಿ ಫೇಲ್ ಆದ ವಿದ್ಯಾರ್ಥಿಗಳನ್ನ ದ್ವೀತಿಯ ಪಿಯುಸಿಗೆ ಪಾಸ್ ಮಾಡಲಾಗಿತ್ತು. ಈಗ ಮತ್ತೆ ಆದೇಶ ಹೊರಡಿಸಿ ಪರೀಕ್ಷೆ ಮಾಡುವಂತೆ ಪಿಯು ಬೋರ್ಡ್ ಸೂಚನೆ ನೀಡಿದೆ.
Advertisement
Advertisement
ಅಕ್ಟೋಬರ್ 20 ಒಳಗೆ ಕಾಲೇಜು ಹಂತದಲ್ಲಿ ಪರೀಕ್ಷೆ ಮಾಡುವಂತೆ ಸೂಚನೆ. ಪಿಯುಸಿ ಬೋರ್ಡ್ ಗೊಂದಲದ ಆದೇಶಕ್ಕೆ ಕಾಲೇಜುಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಕೊರೊನಾ ಸಮಯದಲ್ಲಿ ಪರೀಕ್ಷೆ ಮಾಡಿ ಎಂದು ಹೇಳಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಪಿಯು ಬೋರ್ಡ್ ಗೆ ಪಬ್ಲಿಕ್ ಪ್ರಶ್ನೆ..!
* ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ತಲೆ ಕೆಟ್ಟ ಆದೇಶಕ್ಕೆ ಏನ್ ಹೇಳ್ತೀರಾ?
* ಎಕ್ಸಾಂ ಮಾಡೋ ಆತುರದ ಹಿಂದೆ ಇದೆಯಾ ಯಾವುದಾದ್ರು ಹಿತಾಸಕ್ತಿ?
* ನೀವೇ ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಅಂದು ಪಾಸ್ ಮಾಡಿದ ನಂತರ ಈಗ ದಿಢೀರ್ ಅಂತ ಎಕ್ಸಾಂ ಮಾಡಲು ಹೊರಟರೇ ಹೇಗೆ?
* ಕೊರೊನಾ ರೌದ್ರತೆ ಮಧ್ಯೆ ಈಗ ಪರೀಕ್ಷೆ ಸಹವಾಸಬೇಕಾ?
* ಎಕ್ಸಾಂನಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ರೆ ವಿದ್ಯಾರ್ಥಿಗಳ ಕಥೆ ಏನು?
* ಪರೀಕ್ಷೆ ಮಾಡಿ ಅಂದಿದ್ದೀರ ಹೇಗೆ ಮಾಡಬೇಕು ಅನ್ನೋ ಮಾರ್ಗಸೂಚಿ ಕೊಟ್ಟಿಲ್ಲ.
* ಮಾರ್ಗಸೂಚಿ ಇಲ್ಲದೆ ಮಕ್ಕಳಿಗೆ ತೊಂದರೆ ಆದ್ರೆ ಯಾರು ಜವಾಬ್ದಾರಿ.
* ಕಾಲೇಜು ಪ್ರಾರಂಭವಾದ ನಂತರ ಪರೀಕ್ಷೆ ನಡೆಸಿದ್ರೆ ಏನಾದ್ರು ಸಮಸ್ಯೆ ಆಗುತ್ತಾ?
* ಯಾರ ಒತ್ತಡಕ್ಕಾದ್ರು ಮಣಿದು ಎಕ್ಸಾಂ ಮಾಡಲು ಆದೇಶ ಹೊರಡಿಸಲಾಗಿದ್ಯಾ..?
* ವಿದ್ಯಾರ್ಥಿಗಳ ಮಕ್ಕಳ ಜೀವಕ್ಕೆ ಬೆಲೆಯೇ ಇಲ್ವಾ..?