ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷ ಬೆನ್ನಲೆ ದೇಶಕ್ಕೆ ಭಯೋತ್ಪಾದಕರ ಭೀತಿ ಆರಂಭವಾಗಿದೆ. ದೇಶದಲ್ಲಿ ದುಷ್ಕೃತ್ಯ ಎಸೆಗಲು ಸಂಚು ನಡೆದಿದ್ದು, ಇದಕ್ಕಾಗಿ ಉಗ್ರರರು ಗಡಿ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕ್ ಆಕ್ರಮಿತ ಗಡಿ ಅಥವಾ ಬಿಹಾರ ಮಾರ್ಗವಾಗಿ ಭಾರತ-ನೇಪಾಳ ಗಡಿ ಮೂಲಕ ಉಗ್ರರು ಭಾರತಕ್ಕೆ ನುಸುಳಬಹುದು ಎಂದು ಜೂನ್ 22 ರಂದು ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಗಡಿಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.
Advertisement
Advertisement
ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದ ಐಎಸ್ಐ ತಾಲಿಬಾನ್ ಮತ್ತು ಜೈಶ್ ಭಯೋತ್ಪಾದಕರ ಸಹಾಯದಿಂದ ಉಗ್ರರು ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದೆ. ಅವರ ಗುರಿ ದೆಹಲಿ ಮತ್ತು ಪ್ರಮುಖ ರಾಜಕೀಯ ವ್ಯಕ್ತಿಗಳು ಆಗಿರಬಹುದು ಎಂದು ಊಹಿಸಿದೆ.
Advertisement
ಈ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಭಾರತ ನೇಪಾಳ ಗಡಿಯಲ್ಲಿ ಹೆಚ್ಚು ಭದ್ರತೆಯನ್ನು ನಿಯೋಜನೆ ಮಾಡಿದ್ದು, ಹದ್ದಿನ ಕಣ್ಣಿಡಲಾಗಿದೆ. ಚೀನಾ-ಭಾರತ ನಡುವಿನ ಸಂಘರ್ಷ ಹೊತ್ತಲ್ಲಿ ಗುಪ್ತಚರ ಇಲಾಖೆ ಮಾಹಿತಿ ಆತಂಕ ಮೂಡಿಸಿದೆ.