ಬಹುತೇಕರಿಗೆ ಸಂಡೇ ಬಂದ್ರೆ ಬಾಡೂಟ ಇರಲೇಬೇಕು. ಇನ್ನೂ ಮನೆಯಿಂದ ದೂರ ರೂಮ್ ಮಾಡಿಕೊಂಡು ಹುಡುಗರಿಗೆ ಅಮ್ಮ ಮಾಡುವ ಚಿಕನ್ ರೆಸಿಪಿ ನೆನೆಪಾಗುತ್ತಾ ಇರುತ್ತೆ. ರೂಮಿನಲ್ಲಿಯೇ ಮಾಡೋಣ ಅಂದ್ರೆ ಎಲ್ಲ ಸಾಮಾಗ್ರಿಗಳ ವ್ಯವಸ್ಥೆ ಇರಲ್ಲ. ಪಾತ್ರೆ ಇದ್ರೆ ಮಿಕ್ಸಿ ಇರಲ್ಲ. ಹಾಗಾಗಿ ಕಡಿಮೆ ಪದಾರ್ಥ ಬಳಸಿ ರುಚಿ ರುಚಿಯಾದ ಗ್ರೀನ್ ಚಿಲ್ಲಿ ಚಿಕನ್ ಮಾಡುವ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
* ಚಿಕನ್ – 1/4 ಕೆಜಿ
* ಹಸಿ ಮೆಣಸಿನಕಾಯಿ – 5 ರಿಂದ 6
* ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 2 ಟೀ ಸ್ಪೂನ್
* ಜೀರಿಗೆ – ಒಂದು ಟೀ ಸ್ಪೂನ್
* ಈರುಳ್ಳಿ- 1 ಮಧ್ಯಮ ಗಾತ್ರದ್ದು
* ಟೊಮೆಟೋ – 1 (ದೊಡ್ಡ ಗಾತ್ರದ್ದು)
* ಕೋತಂಬರಿ, ಪುದಿನಾ ಸೊಪ್ಪು
* ಅರಿಶಿನ- ಚಿಟಿಕೆ
* ಗರಂ ಮಾಸಾಲಾ ಪೌಡರ್- 1 ಟೀ ಸ್ಪೂನ್
* ಉಪ್ಪು- ರುಚಿಗೆ ತಕ್ಕಷ್ಟು
* ಎಣ್ಣೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಚಿಕನ್ ಚೆನ್ನಾಗಿ ಬಿಸಿನೀರಿನಲ್ಲಿ ತೊಳೆದು ಎತ್ತಿಟ್ಟುಕೊಳ್ಳಿ.
* ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇರಿಸಿ. ಎರಡರಿಂದ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಜೀರಿಗೆ ಹಾಕಿ. ಜೀರಿಗೆ ಫ್ರೈ ಆಗ್ತಿದ್ದಂತೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ. ನಂತರ ಚಿಕ್ಕದಾಗಿ ಕಟ್ ಮಾಡಿರುವ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಬೇಯಿಸಬೇಕು.
* ತದನಂತರ ಟೊಮಾಟೋ ಮತ್ತು ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
* ಈಗ ತೊಳೆದು ಕತ್ತರಿಸಿಕೊಂಡಿರುವ ಚಿಕನ್ ಹಾಕಿ. ಮಸಾಲೆ ಜೊತೆ ಚಿಕನ್ ಚೆನ್ನಾಗಿ ಮಿಕ್ಸ್ ಮಾಡಿ.
Advertisement
* ತದನಂತರ ಚಿಟಿಕೆ ಅರಿಶಿನ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ರಿಂದ 6 ನಿಮಿಷ ಬೇಯಿಸಿ.
* ಬೇಯಿಸಿದ ನಂತರ ಮುಚ್ಚಳ ತೆಗೆದು ಕೋತಂಬರಿ ಮತ್ತು ಪುದಿನಾ ಸೊಪ್ಪು ಉದುರಿಸಿ ಮೂರರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಕಲಕಿ, ಮತ್ತೆ ಎರಡು ನಿಮಿಷ ಬೇಯಿಸಿದ್ರೆ ರುಚಿ ರುಚಿಯಾದ ಗ್ರೀನ್ ಚಿಲ್ಲಿ ಚಿಕನ್ ರೆಡಿ.