ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಂದ ಬಿಟ್ಟು ಬಿಡದೇ ತುಂತುರು ಮಳೆ ಸುರಿಯುತ್ತಿದೆ.
ನಿವಾರ್ ಮತ್ತೆ ಬುರೇವಿ ಚಂಡ ಮಾರುತದ ಬಳಿಕ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಉಂಟಾಗಿದೆ. ಈ ಚಂಡಮಾರುತ ಭಾರತ ಸೇರಿದಂತೆ 13 ದೇಶಗಳ ಮೇಲೆ ಅಪ್ಪಳಿಸಲಿದೆ. ಅದರಲ್ಲೂ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ.
Advertisement
Advertisement
ಬುರೇವಿ ಚಂಡ ಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ ಇರಲಿದೆ. ಈ ಮಳೆ ಇಂದು ರಾಜ್ಯದಲ್ಲಿ ರೈತರ ಬಂದ್ ಮತ್ತು ಪ್ರತಿಭಟನೆಗೆ ಮಳೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ರೈತ ಸಂಘಟನೆಗಳ ಜೊತೆ ವಿವಿಧ ಸಂಘಟನೆಗಳು ಬಂದ್ ಬೆಂಬಲ ಕೊಟ್ಟಿವೆ. ಬೆಂಗಳೂರಿನಲ್ಲಿ ಮೂಲೆ ಮೂಲೆಯಿಂದ ರೈತರು ರ್ಯಾಲಿ ಹೊರಡುತ್ತಾರೆ. ಈ ತುಂತುರು ಮಳೆ ಮುಂದುವರಿದರೆ ಇಂದಿನ ಹೋರಾಟಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮಳೆ- ಗಾಳಿಗೂ ಜಗ್ಗದೇ ರೈತರು ಮತ್ತು ವಿವಿಧ ಸಂಘಟನೆಗಳು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿ ಹೋರಾಟ ಮಾಡೋದು ಪಕ್ಕಾ ಆಗಿದೆ. ಆದರೆ ಈ ತುಂತುರು ಮಳೆ ನಿಲ್ಲುತ್ತಾ ಅಥವಾ ಇಡೀ ಮುಂದುವರಿಯುತ್ತಾ ಕಾದು ನೋಡಬೇಕಿದೆ.