– ಬೌರಿಂಗ್ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ಮತ್ತೊಂದೆಡೆ ಸಾರ್ಜಜನಿಕರು ಓಡಾಡುವ, ಮನೆಗಳಿರುವ ರಸ್ತೆಯ ಪಕ್ಕದಲ್ಲೇ ಕೋವಿಡ್ನಿಂದ ಮೃತಪಟ್ಟರ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯಲ್ಲಿ ಬಳಿಸಿದ್ದ ಪಿಪಿಇ ಕಿಟ್ಗಳು ಬೆಂಗಳೂರಿನ ಬೀದಿ ಬೀದಿಯಲ್ಲಿ ಬಿದ್ದಿದೆ.
ಕೋವಿಡ್ ವಾರ್ಡಿನಲ್ಲಿ ವೈದ್ಯರು ಧರಿಸಿದ್ದ ಮಾಸ್ಕ್ಗಳು ಅಥವಾ ಜನ ಧರಿಸಿದ ಮಾಸ್ಕ್ಗಳನ್ನು ರಸ್ತೆಯಲ್ಲಿ ಎಸೆಯಲಾಗುತ್ತಿದೆ. ಕಸದ ಗಾಡಿಯಲ್ಲಿ ಪಿಪಿಇ ಕಿಟ್ ತೆಗೆದುಕೊಂಡು ಹೋಗುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದಾರೆ. ಇದರಿಂದ ಕೋರಮಂಗಲದ ರಸ್ತೆ ರಸ್ತೆಯಲ್ಲಿ ಬಳಸಿದ್ದ ಮಾಸ್ಕ್ಗಳ ರಾಶಿಯೇ ಬಿದ್ದಿದೆ.
Advertisement
Advertisement
ಮಾಸ್ಕ್ಗಳ ವಿಲೇವಾರಿಗೆ ಪ್ರತ್ಯೇಕ ಗೈಡ್ ಲೈನ್ ಇದ್ದರೂ ರಸ್ತೆ ರಸ್ತೆಯಲ್ಲಿ ಮಾಸ್ಕ್ಗಳ ರಾಶಿ ಇದೆ. ಸಾರ್ವಜನಿಕರು ಆ ಪಿಪಿಇ ಕಿಟ್ ತುಳಿದುಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಕಸದ ವಾಹನದ ಎಡವಟ್ಟಿಗೆ ಜನ ಭಯಭೀತರಾಗಿದ್ದಾರೆ.
Advertisement
ಬೌರಿಂಗ್ ಆಸ್ಪತ್ರೆಯಲ್ಲಿ ಅವಾಂತರ
ಇತ್ತ ಬೌರಿಂಗ್ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವಿಲೇವಾರಿ ಮಾಡದೆ ಹಾಗೆಯೇ ರಾಶಿ ರಾಶಿ ಪಿಪಿಇ ಕಿಟ್ ಬಿದ್ದಿವೆ. ಕೋವಿಡ್ ರೋಗಿಗಳು ಇರುವ ವಾರ್ಡಿನಲ್ಲಿ ವೈದ್ಯರು ಈ ಕಿಟ್ಗಳನ್ನು ಬಳಸಲಾಗಿದೆ. ಆದರೆ ಇವುಗಳನ್ನು ವಿಲೇಮಾರಿ ಮಾಡದೆ ಆಸ್ಪತ್ರೆಯಲ್ಲೇ ರಾಶಿ ರಾಶಿ ಪಿಪಿಇ ಕಿಟ್ ಬಿದ್ದಿದೆ.
Advertisement
ಈಗಾಗಲೇ ಬೌರಿಂಗ್ ಆಸ್ಪತ್ರೆಗಳಲ್ಲಿ ಕೊರೊನಾ ವಾರಿಯರ್ಸ್ಗೆ ವಕ್ಕರಿಸುತ್ತಿದೆ. ಇಂತಹ ನಿರ್ಲಕ್ಷದಿಂದ ಮತ್ತಷ್ಟು ಸೋಂಕು ಹರಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಕೂಡಲೇ ಎಚ್ಚೆತ್ತು ಪಿಪಿಇ ಕಿಟ್ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಗಂಡಾಂತರ ತಪ್ಪಿದ್ದಲ್ಲ ಎನ್ನಲಾಗಿದೆ. ಆಸ್ಪತ್ರೆಯೇ ಇತರ ಎಡವಟ್ಟು ಮಾಡಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.