ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸಿ ಕೊರೊನಾ 1 ಲಕ್ಷದ ಗಡಿ ದಾಟಿದೆ. ಕೊರೊನಾ ತಡೆಗೆ ಮಾದರಿ ಆಗಿದ್ದ ಕರ್ನಾಟಕದಲ್ಲಿ ಆಗಸ್ಟ್ ನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಆಗಸ್ಟ್ ನಲ್ಲೇ ಅರ್ಧ ಲಕ್ಷದಷ್ಟು ಹೊಸ ಸೋಂಕಿತರು ಪತ್ತೆ ಆಗಿದ್ದಾರೆ.
ಇಡೀ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ 50 ಸಾವಿರದ ಗಡಿ ದಾಟಿ ಈಗ 3 ಲಕ್ಷದತ್ತ ಹೋಗುತ್ತಿದೆ. ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದಿದ್ದ ಸರ್ಕಾರ ಆಮೇಲೆ ದೇವರ ಮೇಲೆ ಭಾರ ಹಾಕ್ತು. ಸದ್ಯ ಕೊರೊನಾ ನಿಯಂತ್ರಣ ಅಸಾಧ್ಯ ಎನ್ನುತ್ತಿದೆ. ಸರ್ಕಾರದ ಎಡವಟ್ಟು ನಿರ್ಧಾರಗಳು ಮತ್ತು ನಿರ್ಲಕ್ಷ್ಯಗಳೇ ಕೊರೋನಾ ಹೆಚ್ಚಳಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಸರ್ಕಾರದ ನಿರ್ಲಕ್ಷ್ಯಗಳೇನು?
* ಲಾಕ್ಡೌನ್ ಇದ್ದರೂ ಅಂತರ್ ಜಿಲ್ಲೆ, ಅಂತರ್ರಾಜ್ಯ ಓಡಾಟಕ್ಕೆ ಅವಕಾಶ.
* ಸೋಂಕು ಇರುವ ಜಿಲ್ಲೆಗಳಿಂದ ಸೋಂಕಿಲ್ಲದ ಜಿಲ್ಲೆಗಳಿಗೆ ಓಡಾಟಕ್ಕೆ ಅನುಮತಿ.
* ಲಾಕ್ಡೌನ್ ವಿಷಯದಲ್ಲಿ ಸರ್ಕಾರದಿಂದ ಪದೇ ಪದೇ ಗೊಂದಲದ ನಿರ್ಧಾರ.
* ಆರಂಭದಲ್ಲಿ ಕೊರೊನಾ ಪತ್ತೆ ಪರೀಕ್ಷೆ ಹೆಚ್ಚಳ ಹೆಚ್ಚಳ ಮಾಡದೇ ನಿರ್ಲಕ್ಷ್ಯ ವಹಿಸಿದ್ದು.
* ಲಾಕ್ಡೌನ್ ವೇಳೆ ಕೊರೊನಾ ತಡೆಗೆ ಇದ್ದ ಅವಕಾಶವನ್ನ ಬಳಸಿಕೊಳ್ಳಲು ಸರ್ಕಾರ ವಿಫಲ