ಬೀದರ್‌ನಲ್ಲಿ ಇಂದು ಮೂವರು ಸಾವು- 45 ಜನರಿಗೆ ಕೊರೊನಾ ಸೋಂಕು

ಬೀದರ್: ಜಿಲ್ಲೆಯಲ್ಲಿ ದಿನೇ ದಿನೇ ಸಾವಿನ ರಣಕೇಕೆ ಹಾಕುತ್ತ ಕ್ರೂರಿ ಕೊರೊನಾ ಅಬ್ಬರಿಸುತ್ತಿದೆ. ಇಂದು ಸಹ ಗಡಿ ಜಿಲ್ಲೆಯಲ್ಲಿ ಮೂವರ ಬಲಿಯೊಂದಿಗೆ ತನ್ನ ಮರಣ ಮೃದಂಗ ವನ್ನು ಮುಂದುವರೆಸಿದೆ.

ಒಟ್ಟು 45 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಅದರಲ್ಲಿ ಮೂವರನ್ನು ಬಲಿ ಪಡೆದಿದೆ. ಬೀದರ್ ನಗರದ 70 ವರ್ಷದ ವೃದ್ಧೆ, 60 ವರ್ಷದ ವೃದ್ಧ ಹಾಗೂ 52 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದ ಮೂವರು ಇಂದು ಮಹಾಮಾರಿಗೆ ಬಲಿಯಾಗಿದ್ದಾರೆ. ಬೀದರ್‍ನಲ್ಲಿ 22, ಹುಮ್ನಬಾದ್ ನಲ್ಲಿ 13 ಬಸವಕಲ್ಯಾಣದಲ್ಲಿ 9 ಹಾಗೂ ಕಮಲಾನಗರ 1 ಸೇರಿದಂತೆ ಇಂದು ಒಟ್ಟು 45 ಜನಕ್ಕೆ ಸೋಂಕು ಧೃಡವಾಗಿದೆ.

- Advertisement -

ಕಂಟೈನ್ಮೆಂಟ್ ಝೋನ್ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1377ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 733 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 585 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 57 ಜನರನ್ನು ಮಹಾಮಾರಿ ಬಲಿ ಪಡೆದಿದೆ.

- Advertisement -