ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ದಿನದಿನೇ ಸ್ಪರ್ಧಾ ಕಣ ರಂಗೇರುತ್ತಿದ್ದಂತೆ ಸ್ಪರ್ಧಿಗಳು ತಮ್ಮ ತಮ್ಮೊಳಗೆ ತಮ್ಮ ಐಕ್ಯತೆಯನ್ನು ಒಡೆಯುವ ರೀತಿಯಲ್ಲಿ ಮುನ್ನುಗ್ಗುತ್ತಿದ್ದಾರೆ ಎನ್ನುವ ಗುಮಾನಿಯೊಂದನ್ನು ಶಂಕರ್ ಅಶ್ವಥ್ ಬಿಚ್ಚಿಟ್ಟಿದ್ದಾರೆ.
Advertisement
ಬಗೆ ಬಗೆಯ ಟಾಸ್ಕ್ ಗಳನ್ನು ಪ್ರತಿದಿನ ಬಿಗ್ ಬಾಸ್ ಕೊಟ್ಟಾಗ ಕೆಲವು ಸ್ಪರ್ಧಿಗಳ ಅಸಲಿ ಮುಖವಾಡ ಕಳಚುತ್ತಿದೆ. ಕೆಲವರು ನಮ್ಮೊಂದಿಗೆ ಹೊರಮನಸ್ಸಿನಿಂದ ಚೆನ್ನಾಗಿ ಮಾತನಾಡಿಸಿ ನಮ್ಮ ಆಶೀರ್ವಾದ ಪಡೆದರೆ ಒಳಮನಸ್ಸಿನಲ್ಲಿ ನಮ್ಮನ್ನೇ ಸೊಲಿಸಿ ಗೆಲುವನ್ನು ಮುಡಿಗೇರಿಸಬೇಕೆಂಬ ಹಂಬಲ ಕೆಲವರಲ್ಲಿ ಕಾಣುತ್ತಿದ್ದೇನೆ ಎಂದು ಅಶ್ವಥ್ ಬಿಗ್ ಬಾಸ್ ಕ್ಯಾಪ್ಟನ್ ಬ್ರೋ ಗೌಡ ಜೊತೆ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಅಶ್ವಥ್ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಂತೆ ಹತ್ತಿರವಿದ್ದ ಗೀತಾ ಭಾವುಕರಾಗಿದ್ದಾರೆ. ಈ ವೇಳೆ ಮತ್ತೆ ಬಂದ ಅಶ್ವಥ್ ನೀನು ಯಾಕಮ್ಮ ಕೂಗುತ್ತಿದ್ದೀಯ ನಿನಗೆ ಹೇಳಿದ್ದಲ್ಲ ನಿನ್ನ ಭಕ್ತಿಯೇ ನಿನ್ನ ಶಕ್ತಿ ಎಂದು ಸಮಾಧಾನ ಮಾಡಿ ಮಾತು ಮುಂದುವರಿಸಿದರು. ಕೆಲವರು ನಮ್ಮೊಂದಿಗೆ ಬಂದು ನಿಮ್ಮಿಂದ ತಿಳಿದುಕೊಳ್ಳಲು ತುಂಬಾ ಇದೆ ಎಂದು ಹೇಳಿ ನಮ್ಮನ್ನೇ ಪರೀಕ್ಷಿಸುತ್ತಿದ್ದಾರೆ. ಆದರೆ ಅವರ ಪರೀಕ್ಷೆ ನನಗೆ ಅರ್ಥವಾಗುತ್ತಿದೆ ಅವರನ್ನು ಯಾವಾಗ ಹಿಡಿದು ನಿಲ್ಲಿಸಬೇಕು ಆಗ ನಿಲ್ಲಿಸುತ್ತೇನೆ ಎಂದು ಸೇಡು ತೀರಿಸಿಕೊಳ್ಳೋ ಹಿಂಟ್ ನೀಡಿದ್ರು.
Advertisement
ನಾವೆಲ್ಲ ಒಂದೇ ಎಂದು ಬಿಗ್ ಬಾಸ್ ಮನೆಗೆ ಬಂದ ಎಲ್ಲರೂ, ಇದೀಗ ಒಬ್ಬೊಬ್ಬರೆ ಸ್ಪರ್ಧೆಯ ರೋಚಕತೆಯನ್ನು ಮೂಡಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ತಮ್ಮ ಮನಸ್ಸಿನ ಮಾತು ಅರಿಯುವಂತೆ ನಡೆದುಕೊಳ್ಳುತ್ತಿದ್ದಾರೆ.