ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ದುರಂತ ಹಿನ್ನೆಲೆ ತಕ್ಷಣ ಸಿಎಂ ಅವಘಡ ಸಂಭವಿಸಿರುವ ಸ್ಥಳಕ್ಕೆ ಭೇಟಿ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಆಗಿರುವ ದುರಂತ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತವರು ಕ್ಷೇತ್ರದಲ್ಲಿ ನಡೆದ ದುರಂತ ಸ್ಥಳಕ್ಕೆ ಸಿಎಂ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೂತನ ಸಚಿವ ನಿರಾಣಿ ಕೂಡ ಅಲ್ಲಿ ಭೇಟಿ ನೀಡಬೇಕು. ಅಲ್ಲಿ ನಡೆದಿರುವ ಅವಘಡ ಮತ್ತು ಸಾವು ನೋವಿನ ಕುರಿತಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement
Advertisement
ನಾನು ಗ್ರಾನೈಟ್ ಹಿನ್ನೆಲೆಯಿಂದ ಬಂದವನು. ಅಷ್ಟು ದೊಡ್ಡ ಪ್ರಮಾಣದ ಗ್ರಾನೈಟ್ ಹೇಗೆ ಸಂಗ್ರಹಿಸಿಟಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವಾಗ ಬೇಕಾದಂತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತನಿಖೆ ಎಂದರೆ ಈಗ ನಡೀತಾ ಇರೋ ಲೀಗಲ್ ಆಗಿರೋದನ್ನು ಬಂದ್ ಮಾಡಬೇಕು ಅಂತ ಅಲ್ಲ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ದುರಂತದಿಂದಾಗಿ ಮೂರು ನಾಲ್ಕು ಜಿಲ್ಲೆಗೆ ಹಾನಿ ಆಗಿದೆ. ಇದಕ್ಕೆಲ್ಲ ಯಾರು ಹೊಣೆಯಾಗಿದ್ದಾರೆ. ಯಾರು ಜವಾಬ್ದಾರಿ ತಗೋತಾರೆ ಎಂದು ಪ್ರಶ್ನಿಸಿದ್ದಾರೆ.
Advertisement
ಇನ್ನು ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿರುವ ಸಿಎಂ, ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅಕ್ರಮ ಗಣಿಗಾರಿಕೆಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.