ChikkaballapurCrimeDistrictsKarnatakaLatestMain Post

ಬಾವನಿಂದಲೇ ಬಾಮೈದನ ಕೊಲೆ

ಚಿಕ್ಕಬಳ್ಳಾಪುರ: ಬಾವನೇ ಬಾಮೈದನನ್ನ ತನ್ನ ಸಹಚರರ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ಜನವರಿ 04 ರಂದು ನಗರದ ಬೈಪಾಸ್ ರಸ್ತೆಯಲ್ಲಿ 25 ವರ್ಷದ ಇಮ್ರಾನ್ ಖಾನ್ ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೊಲೆ ಮಾಡಿದ ಮೃತ ಇಮ್ರಾನ್ ಖಾನ್ ಬಾವ ಚಾಂದ್ ಪಾಶಾ, ಶಫೀಉಲ್ಲಾ, ಸಮೀಉಲ್ಲಾ, ಹಾಗೂ ಟಿಪ್ಪುವನ್ನ ಬಂಧಿಸಿದ್ದಾರೆ.

ಅಕ್ಕನಿಗೆ ಮೋಸ ಮಾಡಿದ್ದ: ಮೃತ ಇಮ್ರಾನ್ ಖಾನ್ ಅಕ್ಕ ರುಕ್ಸನಾಳನ್ನ 2014ರಲ್ಲಿ ಚಾಂದ್ ಪಾಷಾ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚಾಂದ್ ಪಾಶಾ ಮುಮ್ತಾಜ್ ಅನ್ನೋ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿ ಆಕೆಯನ್ನ ಸಹ ವಿವಾಹವಾಗಿದ್ದನು. ಆಕೆಯನ್ನ ವಿವಾಹವಾದ ಮೇಲೆ ರುಕ್ಸನಾ ಮನೆಗೆ ಬರೋದು ಕಡಿಮೆ ಮಾಡ್ತಾನೆ. ಹೀಗಾಗಿ ಈ ವಿಚಾರದಲ್ಲಿ ರುಕ್ಸನಾ ತಮ್ಮ ಮೃತ ಇಮ್ರಾನ್ ಹಾಗೂ ಚಾಂದ್ ನಡುವೆ ಗಲಾಟೆಗಳು ನಡೆದಿದ್ದವು.

ಮೂರ್ನಾಲ್ಕು ಬಾರಿ ಪ್ಲಾನ್ ಪ್ಲಾಪ್: ಮಾತುಕತೆ ರಾಜೀ ಪಂಚಾಯತಿ ಅಂತ ಸಾಕಷ್ಟು ಬಾರಿ ನಡೆದಿತ್ತು. ತನಗೆ ಹೊಡೆದಿದ್ದ ಇಮ್ರಾನ್ ಕೊಲೆಗೆ ಚಾಂದ್ ಪಾಷಾ ತನ್ನ ಅಣ್ಣ ಟಿಪ್ಪು ಹಾಗೂ ಹಿಂದೂಪುರ ಮೂಲದ ಲಾರಿ ಚಾಲಕರಿಬ್ಬರ ಜೊತೆಗೂಡಿ ಡಿಸೆಂಬರ್ ನಲ್ಲೇ ಕೊಲೆಗೆ ಪ್ಲಾನ್ ಮಾಡಿದ್ದ. ಆದರೆ ಮೂರ್ನಾಲ್ಕು ಬಾರಿ ಪ್ಲಾನ್ ಪ್ಲಾಪ್ ಆಗಿತ್ತು. ಕೊನೆಗೆ ಜನವರಿ 04 ರಂದು ಇಮ್ರಾನ್ ಖಾನ್ ತಂದೆ-ತಾಯಿ ಹಿಂದೂಪುರ ಆಸ್ಪತ್ರೆಯಲ್ಲಿದ್ದರು. ಆ ದಿನ ಬಿಟ್ಟರೆ ಒಂಟಿಯಾಗಿ ಇಮ್ರಾನ್ ನಮಗೆ ಸಿಗೋದು ಕಷ್ಟ ಆಗುತ್ತೆ ಅಂತ ಲಾರಿ ಕೆಟ್ಟು ಹೋಗಿದೆ ಬಾ ಅಂತ ನಂಬಿಸಿ ಮನೆಯಿಂದ ಕರೆದುಕೊಂಡು ಹೋದ ಚಾಂದ್ ಹಾಗೂ ಇತರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಅಲಕಾಪುರದ ಕೆರೆ ಬಳಿ ಬಟ್ಟೆ ಬಿಚ್ಚಿ ಬಿಸಾಕಿ ಬೇರೆ ಬಟ್ಟೆ ಹಾಕ್ಕೊಂಡು ಮನೆಗೆ ಹೋಗಿ ಯಾರಿಗೂ ತಿಳಿಯದಂತೆ ಇದ್ದರು. ಇನ್ನೂ ಮೊದಲೇ ತಾವು ತಗಾಲಕ್ಕೊಳಬಾರದು ಅಂತ ಮೊಬೈಲ್ ಗಳನ್ನ ಸಹ ತಮ್ಮ ಮನೆಗಳಲ್ಲೇ ಇಟ್ಟು ಬಂದಿದ್ದರು. ಆದ್ರೆ ಮೊದಲೇ ಚಾಂದ್ ಮೇಲಿನ ಅನುಮಾನದ ಮೇರೆಗೆ ಗೌರಿಬಿದನೂರು ನಗರ ಪೊಲೀಸರು ತನಿಖೆ ನಡೆಸಿದಾಗ ಅಂದು ಘಟನೆ ನಡೆದ ದಿನ ಈ ನಾಲ್ವರು ಚಾಂದ್ ಎರಡನೇ ಹೆಂಡತಿ ಮಾಮ್ತಾಜ್ ಮನೆ ಅಲಕಾಪುರಕ್ಕೆ ಬಂದು ಹೋದ ಮಾಹಿತಿ ಸಿಕ್ಕಿರುತ್ತೆ. ಹೀಗಾಗಿ ಮೊಬೈಲ್ ಗಳು ಟವರ್ ಲೋಕೇಷನ್ ಒಂದು ಕಡೆ ಇವರು ಒಂದು ಕಡೆ ಹೇಗೆ ಅಂತ ಪೊಲೀಸ್ ಭಾಷೆಯಲ್ಲಿ ಬೆಂಡೆತ್ತಿದಾಗ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.

Leave a Reply

Your email address will not be published.

Back to top button