Bengaluru CityCinemaDistrictsKarnatakaLatestMain PostSandalwood

ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ವಿನಾಯಕ್ ಜೋಶಿ ತಮ್ಮ ಬಹುಕಾಲದ ಗೆಳತಿ ವರ್ಷಾ ಬೆಳವಾಡಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಇಂದು ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಿತು. 15 ರಿಂದ 55 ವರ್ಷದೊಳಗಿನವರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದರಿಂದ, ಮದುವೆಯಲ್ಲಿ ಸ್ನೇಹಿತರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಸ್ನೇಹಿತರಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಿದ್ದಾರೆ.

ವರ್ಷಾ ಬೆಳವಾಡಿ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಯಚರಾಗಿದ್ದರು. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೇ ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ ಎಂದು ವಿನಾಯಕ್ ಜೋಶಿ ಈ ಹಿಂದೆ ತಿಳಿಸಿದ್ದರು.

ವಿನಾಯಕ್ ಜೋಶಿ ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಯಾಲಿಟಿ ಶೋ ‘ಬಿಗ್‍ಬಾಸ್’ ಮೊದಲ ಸೀಸನ್‍ನಲ್ಲಿ ವಿನಾಯಕ್ ಸ್ಪರ್ಧಿಸಿದ್ದರು.

Leave a Reply

Your email address will not be published. Required fields are marked *

Back to top button