ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೇ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ ಚಾಲಕ ಸಮಯ ಪ್ರಜ್ಞೆ ತೋರಿ 40ಕ್ಕೂ ಹೆಚ್ಚು ಜನರ ಪ್ರಾಣವನ್ನು ಉಳಿಸಿರುವ ಘಟನೆ ನಡೆದಿದೆ. ಬಸ್ನಲ್ಲಿ ನಡೆದ ಪ್ರತಿ ಕ್ಷಣದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೆ.5 ರಂದು ನವನಗರದ ಬ್ರಿಡ್ಜ್ ಬಳಿ ಬರುತ್ತಿದಂತೆ ಬಿ.ಆರ್.ಟಿ.ಎಸ್ನ ಚಿಗರಿ ಬಸ್ ಚಾಲಕನಿಗೆ ತಲೆಸುತ್ತು ಶುರುವಾಗಿದ್ದು, ಇದರ ನಡುವೆಯೇ ಸ್ವಲ್ಪ ದೂರ ಬಸ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಆದರೆ ಆತನಿಗೆ ಮುಂದೆ ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇನೆ ಎಂದು ಅರಿವಾದ ತಕ್ಷಣ ಚಲಿಸುತ್ತಿದ್ದ ಬಸ್ ಅನ್ನು ನಿಯಂತ್ರಣಕ್ಕೆ ತಂದು ರಸ್ತೆ ಪಕ್ಕ ನಿಲ್ಲಿಸಿದ್ದಾನೆ.
Advertisement
Advertisement
ಬಸ್ ನಿಲ್ಲುತ್ತಿದಂತೆ ಪ್ರಜ್ಞೆ ತಪ್ಪಿದ ಚಾಲಕ ಸಿಟ್ ನಿಂದ ಕೆಳಗೆ ಬಿದಿದ್ದಾನೆ. ಆಗ ಬಸ್ ನಲ್ಲಿದ್ದ ಮಹಿಳಾ ಪ್ರಯಾಣಿಕರು ಗಾಬರಿಗೊಂಡು ಹಿಂದೆ ಓಡುತ್ತಾರೆ. ಬಸ್ಸಿನಲ್ಲೇ ಇತರ ಪ್ರಯಾಣಿಸಕರು ಚಾಲಕನಿಗೆ ನೀರು ಕುಡಿಸಿ ಹಾರೈಕೆ ಮಾಡಿದ್ದಾರೆ.
Advertisement
ಬಸ್ ಚಾಲಕ ಸರಿಯಾದ ಸಮಯಕ್ಕೆ ಬಸ್ ನಿಲ್ಲಿಸದಿದ್ರೆ ನವನಗರ ಬ್ರಿಡ್ಜ್ ನಿಂದ ಬಸ್ ಕೆಳಗೆ ಬೀಳುವ ಅಪಾಯವಿತ್ತು. ಇದರಿಂದ ಬಹುದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಂತಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.