ಬೀದರ್​​ನಲ್ಲಿ ಕೊರೊನಾ ಮ’ರಣ’ ಕೇಕೆ – 25 ವರ್ಷದ ಯುವತಿ ಸೇರಿ 9 ಮಂದಿ ಬಲಿ

-ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 37ಕ್ಕೇರಿಕೆ

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಮತ್ತೆ 9 ಜನರನ್ನು ಕೊರೊನಾ ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿ ಮರಣ ಮೃದಂಗ ಬಾರಿಸಿದೆ.

ಬೀದರ್ ನಗರದ ಓಲ್ಡ್ ಸಿಟಿಯ 70 ಹಾಗೂ 65 ವರ್ಷದ ವೃದ್ಧರು ಹಾಗೂ 54 ವರ್ಷದ ವ್ಯಕ್ತಿ ಬಲಿಯಾದ್ರೆ, ಬೀದರ್ ತಾಲೂಕಿನ ಅಮಲಾಪರ್ ಗ್ರಾಮದ 25 ವರ್ಷದ ಯುವತಿಯನ್ನು ಬಲಿ ಪಡೆದಿದೆ. ತೆಲಂಗಾಣದ ಜಹೀರಾಬಾದ್ ಮೂಲದ 63 ವರ್ಷದ ವ್ಯಕ್ತಿ ಬ್ರಿಮ್ಸ್ ನಲ್ಲಿ ಸಾವನ್ನಪ್ಪಿದ್ದು, ಬೀದರ್ ನಗರದಲ್ಲಿಯೇ ಐದು ಜನ ಕೊರೊನಾಗೆ ಬಲಿಯಾಗಿದ್ದಾರೆ. ಬಸವಕಲ್ಯಾಣ ಪಟ್ಟಣದ 60 ವರ್ಷದ ವೃದ್ಧೆ, 32 ವರ್ಷದ ಯುವತಿ, ಭಾಲ್ಕಿ 54 ವರ್ಷದ ವ್ಯಕ್ತಿ, ಚಿಟ್ಟಗುಪ್ಪ ಪಟ್ಟಣದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

- Advertisement -

ಉಸಿರಾಟ, ಕಿಡ್ನಿ, ಹೃದಯ ಸಂಬಂಧಿತ ಕಾಯಿಲೆ, ಜ್ವರ ಸೇರಿದಂತೆ ಹಲವು ಸಮಸ್ಯೆಯಿಂದ ಬಳಲುತ್ತಾ ಸಾವನ್ನಪ್ಪಿದರು. ಬಹುತೇಕರಿಗೆ ಕಂಟೈನ್‍ಮೆಂಟ್ ಝೋನ್ ನಿವಾಸಿ, ಪ್ರಾಥಮಿಕ ಸಂಪರ್ಕ, ಮುಂಬೈ ಕಂಟಕದಿಂದ ಸೋಂಕು ಧೃಡವಾಗಿದೆ. ಎಲ್ಲರಿಗೂ ಸಾವನ್ನಪ್ಪಿದ ಬಳಿಕ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಎರಡನೇ ದಿನಗಳಲ್ಲಿ 15 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

- Advertisement -

- Advertisement -