ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

Advertisements

ಜಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಭರವಸೆಯ ನಟ ಎನಿಸಿಕೊಂಡಿದ್ದರು. ಬಜಾರ್ ನಲ್ಲಿ ಮಾಸ್ ಪ್ರೇಕ್ಷಕ ಬಳಗವನ್ನು ರಂಜಿಸಿದ್ದ ಧನ್ವೀರ್ ಮಾಸ್ ಹೀರೋ ಆಗಿ ಹೊರಹೊಮ್ಮಿದ್ರು. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟ ಬಂಪರ್ ಸಿನಿಮಾ ಮೂಲಕ ಆಕ್ಷನ್ ಹೀರೋ ಆಗಿ ಮಿಂಚಲು ಸಕಲ ತಯಾರಿ ಕೂಡ ನಡೆಸಿದ್ದರು. ಈಗ ಆಕ್ಷನ್ ಸಿನಿಮಾಗೂ ಮುನ್ನ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ ಧನ್ವೀರ್.

Advertisements

ಹೌದು, ಬಂಪರ್ ಸಿನಿಮಾ ನಿರ್ದೇಶಕ ಹರಿ ಸಂತೋಷ್ ಧನ್ವೀರ್ ರನ್ನು ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ತರಲು ಹೊರಟಿದ್ದು, ತಾವೇ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ಬೈ2ಲವ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಆದ್ದರಿಂದ ಬಂಪರ್ ಸಿನಿಮಾಗೂ ಮೊದಲು ಧನ್ವೀರ್ ಬೈ 2 ಲವ್ ಪ್ರೇಮ್ ಕಹಾನಿ ಹೇಳಲು ತೆರೆ ಮೇಲೆ ಬರೋದು ಕನ್ಪರ್ಮ್ ಆಗಿದೆ.

Advertisements

ಚಿತ್ರದಲ್ಲಿ ಧನ್ವೀರ್ ಜೊತೆ ಕಿಸ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಾಯಕಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೊಸ ಚಿತ್ರ ದುಬಾರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ‘ಬೈ2ಲವ್’ ಸಿನಿಮಾದಲ್ಲಿ ಧನ್ವೀರ್ ಗೆ ಜೊತೆಯಾಗಲಿದ್ದಾರೆ.

Advertisements

ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ `ಬೈ2ಲವ್’ ಟೀಂ. ಕೆವಿಎನ್ ಪ್ರೊಡಕ್ಷನ್ ಬೈ2ಲವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಸಿನಿಮಾಗಿದೆ.

Advertisements
Exit mobile version