CrimeDharwadDistrictsKarnatakaLatest

ಫೀಲ್ಡ್ ನಲ್ಲಿ ಹೆಸರು ಮಾಡಲು ಅಮಾಯಕನ ಕೊಲೆ

ಧಾರವಾಡ/ಹುಬ್ಬಳ್ಳಿ: ರೌಡಿಸಂ ಫೀಲ್ಡ್ ನಲ್ಲಿ ಹೆಸರು ಮಾಡುವ ಸಲುವಾಗಿ ಪುಡಿರೌಡಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಅಮಾಯಕನನ್ನ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಗಿರಣಿಚಾಳದ ನಿವಾಸಿ ರವಿ ಮುದ್ದಿನಕೇರಿ ಕೊಲೆಯಾದ ವ್ಯಕ್ತಿ. ಮಂಗಳವಾರ ರವಿಯೊಂದಿಗೆ ಗಿರಿಣಿಚಾಳದ ಪುಡಿರೌಡಿ ವಿಜಯ್ ಆಲೂರ ಕ್ಷುಲ್ಲಕ ಕಾರಣಕ್ಕೆ ಜಗಳ ತಗೆದು ಹಿಗ್ಗಾಮುಗ್ಗಾ ಥಳಿಸಿ ಎದೆಗೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡ ರವಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

ಮರಳಿನ ದಂಧೆಗೆ ಕಡಿವಾಣ ಬಿದ್ದ ಪರಿಣಾಮ ದಾಬಾ ತೆರೆಯಲು ರವಿ ಸಿದ್ಧತೆ ನಡೆಸಿದ್ದರು. ಘಟನೆಯ ನಂತರ ಆರೋಪಿ ವಿಜಯ್ ಪರಾರಿಯಾಗಿದ್ದು, ಕಿಮ್ಸ್ ಗೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button