ಬಾಲ್ಯದಲ್ಲಿ ಮನೆಯಲ್ಲಿ ಅಣ್ಣ-ತಂಗಿ ಜಗಳವಾಡುವುದು, ಕಾಡಿಸುವುದು ಸಾಮಾನ್ಯ. ಸಣ್ಣ-ಪುಟ್ಟ ವಿಚಾರಗಳಿಗೂ ಇಬ್ಬರು ಮಧ್ಯೆ ಜೋರಾಗಿ ಗಲಾಟೆ ಕೂಡ ಆಗುತ್ತದೆ. ಕೆಲವೊಮ್ಮ ಕಾರಣಗಳೇ ಇಲ್ಲದೇ ಜಗಳವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಸಹೋದರಿ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ ಎಂದು ತನ್ನ ತಂದೆಗೆ ಪತ್ರ ಬರೆದಿದ್ದಾಳೆ. ಇದೀಗ ಆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಸ್ವತಃ ಸಹೋದರನೇ ಆ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರಿನಲ್ಲಿ ಈ ಪತ್ರ ಸಖತ್ ವೈರಲ್ ಆಗುತ್ತಿದೆ. ಕ್ರಿಶ್ ಪರ್ಮರ್ ಎಂಬಾತ ಬಾಲ್ಯದಲ್ಲಿ ತನ್ನ ಸಹೋದರಿ ತಮ್ಮ ತಂದೆಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ನನ್ನ ತಂಗಿ ತಂದೆಗೆ ಬರೆದದ್ದು ಇದನ್ನೇ” ಎಂದು ಕ್ರಿಶ್ ಬರೆದುಕೊಂಡಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ?
ಪ್ರೀತಿಯ ತಂದೆಗೆ, ದಯವಿಟ್ಟು ಕ್ರಿಶ್ ಪರ್ಮರ್ ನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ. ಆತ ನನಗೆ ಕಾರಣವೇ ಇಲ್ಲದೆ ಹೊಡೆಯುತ್ತಿದ್ದಾನೆ. ಅಲ್ಲದೇ ಅವನು ನನ್ನ ಮೇಲೆ ಜಂಪ್ ಮಾಡಿ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ದಯವಿಟ್ಟು ಆದಷ್ಟು ಬೇಗ ಆತನನ್ನು ಜೈಲಿಗೆ ಕಳುಹಿಸಿ” ಎಂದು ಸಹೋದರಿ ಮನವಿ ಮಾಡಿಕೊಂಡಿದ್ದಾಳೆ.
Advertisement
ಅಲ್ಲದೇ ಕೊನೆಯಲ್ಲಿ ನಿಮ್ಮ ಪ್ರೀತಿಯ ಮಗಳು ಅನಯಾ ಪರ್ಮರ್, ‘Sister of Stupid krisha parmar’ ಎಂದು ಬರೆದು ಸಹಿ ಹಾಕಿದ್ದಾಳೆ. ಇದೀಗ ಈ ತಮಾಷೆಯ ಪತ್ರ ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿಯಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
“ನನ್ನ ಸಹೋದರಿ ಈ ಪತ್ರವನ್ನು ಬರೆದಾಗ 8 ಅಥವಾ 9 ವರ್ಷ ವಯಸ್ಸಿನವನಾಗಿದ್ದಳು. ನಾನು ಇದನ್ನು ಒಂದು ತಿಂಗಳ ಹಿಂದೆಯಷ್ಟೆ ತಿಳಿದುಕೊಂಡೆ” ಎಂದು ಕ್ರಿಶ್ ಹೇಳಿದ್ದಾಳೆ.
This is what my younger sister wrote to my dad???????? pic.twitter.com/ArKQXuGvfO
— Krish Parmar (@krishparmarr) September 22, 2020