ಬಿಗ್ಬಾಸ್ ಸೀಸನ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಕೆ.ಪಿ. ಅರವಿಂದ್ ನಿಧಿ ಸುಬ್ಬಯ್ಯಗೆ ಬಹಿರಂಗವಾಗಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.
Advertisement
ಬಿಗ್ಬಾಸ್ ಫಸ್ಟ್ ಇನ್ನಿಂಗ್ಸ್ನ ಟಾಸ್ಕ್ ವೇಳೆ ನಿಧಿ ಸುಬ್ಬಯ್ಯ ಹಾಗೂ ಕೆ.ಪಿ ಅರವಿಂದ್ ಮಧ್ಯೆ ಮಾತಿನ ಚಕಮಕಿ ನಡೆದು ಜಗಳ ಆಗಿತ್ತು. ಅಲ್ಲದೇ ಸೆಕೆಂಡ್ ಇನ್ನಿಂಗ್ಸ್ ವೇಳೆ ಕೂಡ ನಿಧಿ ಹಾಗೂ ಅರವಿಂದ್ ಮತ್ತೆ ಜಗಳ ಮಾಡಿಕೊಂಡಿದ್ದರು. ಇದೀಗ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡ ಅರವಿಂದ್ ಪತ್ರ ಬರೆಯುವ ಮೂಲಕ ನಿಧಿ ಸುಬ್ಬಯ್ಯಗೆ ಕ್ಷಮೆಯಾಚಿಸಿದ್ದಾರೆ.
Advertisement
Advertisement
ಹಾಯ್ ಗೆಳತಿ, ಬಿಗ್ಬಾಸ್ ನೀಡಿರುವ ಅವಕಾಶದಲ್ಲಿ ನಾನು ನಿನ್ನ ಬಳಿ ಕ್ಷಮೆ ಕೇಳಲು ಇಚ್ಛಿಸುತ್ತೇನೆ. ನಿನ್ನಲ್ಲಿ ಒಂದು ಒಳ್ಳೆಯ ಸ್ನೇಹಿತೆಯನ್ನು ಕಂಡಿದ್ದೇನೆ. ಗೊತ್ತೊ, ಗೊತ್ತಿಲ್ಲದೆಯೋ ನನ್ನ ಮಾತು ನಿನಗೆ ನೋವುಂಟು ಮಾಡಿದೆ. ನೀನು ನೀಡಿದ ಸಲುಗೆಯನ್ನು ನಾನು ದುರುಪಯೋಗ ಮಾಡಿಕೊಂಡ ಬೇಸರ ನನಗಿದೆ. ಎಲ್ಲಾ ಸಂದರ್ಭದಲ್ಲಿ ಸಲುಗೆಯಿಂದ ಮಾತನಾಡಬಾರದು ಎಂಬ ಅರಿವು ನನಗಾಗಿದೆ. ನಿನ್ನಲ್ಲಿ ಬಂದು ಕ್ಷಮೆ ಕೇಳಿದಾಗ ನಾನು ನಿಜವಾಗಿಯೂ ಹೃದಯದಿಂದ ಬಂದು ನಿನಗೆ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಬೇಕಾಗಿತ್ತು ಮತ್ತು ಅದನ್ನು ಕಾಟಾಚಾರಕ್ಕೋಸ್ಕರ ಕೇಳಿದ್ದಲ್ಲ. ಈ ಸ್ನೇಹ ಜೀವನ ಪರ್ಯಂತ ಸಾಗಲಿ ಎಂದು ಅಂದುಕೊಳ್ಳುತ್ತೇನೆ. ಪ್ರೀತಿ ಸದಾ ಇರಲಿ ಅಂತರಾಳದಿಂದ, ಇಂತಿ ನಿನ್ನ ಸ್ನೇಹಿತ ಕೆ.ಪಿ ಅರವಿಂದ್ ಎಂದು ಪತ್ರ ಬರೆದಿದ್ದಾರೆ.
Advertisement
ಪತ್ರ ಓದಿದ ನಂತರ ಸಂತಸದಿಂದ ನಿಧಿ ಸುಬ್ಬಯ್ಯ, ಖಂಡಿತ ನಾವಿಬ್ಬರು ಲೈಫ್ ಲಾಂಗ್ ಫ್ರೆಂಡ್ ಆಗಿರುತ್ತೇವೆ. ಇದನ್ನು ಇಷ್ಟು ದಿನ ನೀನು ನೆನಪಿನಲ್ಲಿಟ್ಟುಕೊಂಡು ಈಗ ಕ್ಷಮೆ ಕೇಳುತ್ತಿರುವುದು ನನಗೆ ಬೇಸರವಾಗುತ್ತಿದೆ. ಎಲ್ಲವನ್ನು ಮರೆತು ನಾವು ಹೊಸದಾಗಿ ಸ್ನೇಹವನ್ನು ಆರಂಭಿಸೋಣ. ಲವ್ ಯೂ ಆಲ್ವೇಸ್ ಮ್ಯಾನ್.. ಇದನ್ನು ನಿನ್ನ ಹಣೆಯ ಮೇಲೆ ಬರೆದುಕೊಂಡು ನೆನಪಿಟ್ಟುಕೋ ಎಂದಿದ್ದಾರೆ. ಇದನ್ನೂ ಓದಿ:ಬಿಗ್ಬಾಸ್ ಟಾಪ್-4 ಕಂಟೆಸ್ಟೆಂಟ್ ಆಗಿ ವೈಷ್ಣವಿ ಗೌಡ ಔಟ್