– ಪಟ್ಟಿ ರಿಲೀಸ್ ದಿನವೇ ವಿಕ್ಟರಿ ಸಿಂಬಲ್
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ಅಖಾಡಕ್ಕೆ ರಂಗೇರುತ್ತಿದ್ದು, ತೃಣಮೂಲ ಕಾಂಗ್ರೆಸ್ ಒಂದೇ ಬಾರಿಗೆ 291 ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ 20 ಅಲ್ಲ 120 ಬೃಹತ್ ಸಮಾವೇಶಗಳನ್ನು ನಡೆಸಲಿ. ಆದ್ರೆ ಗೆಲುವು ಮಾತ್ರ ನಮ್ಮದೇ ಎಂದು ಹೇಳಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಗೆಲವುವಿನ ಚಿಹ್ನೆ ತೋರಿಸಿದರು.
Advertisement
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ 20 ದೊಡ್ಡ ಸಮಾವೇಶ ಆಯೋಜನೆಗೆ ಮುಂದಾಗಿದೆ. ಈ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ಹಿನ್ನೆಲೆ ಬಹುತೇಕ ಕಮಲ ನಾಯಕರು ಬಂಗಾಳದಲ್ಲಿಯೇ ಉಳಿದುಕೊಂಡು ಪಕ್ಷ ಸಂಘಟನೆ ಜೊತೆಯಲ್ಲಿ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.
Advertisement
Advertisement
294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿ ಅಥವಾ 294 ಹಂತಗಳಲ್ಲಿಯೇ ನಡೆದ್ರೂ ಅಮಿತ್ ಶಾ ಅವರಿಗೆ ಸೋಲು ಖಚಿತ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ತಮ್ಮ ಪಡೆಯನ್ನ ಬಂಗಾಳದಲ್ಲಿ ಬಿಜೆಪಿ ನಿಯೋಜಿಸಿದ್ರೂ ಪ್ರಯೋಜನವಿಲ್ಲ ಎಂದು ಅಮಿತ್ ಶಾಗೆ ಮಮತಾ ಬ್ಯಾನರ್ಜಿ ಸವಾಲು ಎಸೆದರು. ಈ ಹಿಂದೆ ಚುನಾವಣೆ ಆಯೋಗ ಕೇಂದ್ರದಲ್ಲಿರುವ ಬಿಜೆಪಿಗೆ ಅನಕೂಲವಾಗುವಂತೆ ಚುನಾವಣೆ ದಿನಾಂಕ ನಿಗದಿ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇದನ್ನೂ ಓದಿ: 291 ಅಭ್ಯರ್ಥಿಗಳ ಹೆಸರು ಘೋಷಿಸಿದ ದೀದಿ – ಟಿಕೆಟ್ ಹಂಚಿಕೆ ಲೆಕ್ಕಾಚಾರ ಹೀಗಿದೆ
Advertisement
ಜಾತಿ ಸೇರಿದಂತೆ ಪಕ್ಕಾ ರಾಜಕೀಯ ಸಮೀಕರಣದಲ್ಲಿ ಮಮತಾ ಬ್ಯಾನರ್ಜಿ ಟಿಕೆಟ್ ಹಂಚಿಕೆ ಮಾಡಿರುವ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳನ್ನ ಗಮನದಲ್ಲಿರಿಸಿಕೊಂಡು ಟಿಕೆಟ್ ಹಂಚಿಕೆ ಮಾಡಿದ್ದಾರೆ, 291ರ ಪೈಕಿ 50 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ರೆ, 42 ಮುಸ್ಲಿಂ ನಾಯಕರು ಟಿಎಂಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪಕ್ಷಗಳ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಪಶ್ಚಿಮ ಬಂಗಾಳದ ಒಟ್ಟು ಮತಗಳ ಪೈಕಿ ಶೇ.30ರಷ್ಟು ಮುಸ್ಲಿಮರಿದ್ದಾರೆ. ಸರಿ ಸುಮಾರು 100 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವನ್ನ ನಿರ್ಣಯಿಸಲಿವೆ. ಇದನ್ನೂ ಓದಿ: ಬಂಗಾಳದಲ್ಲಿ ಗಮನಸೆಳೆದ ‘ಮಾ’ ಕ್ಯಾಂಟೀನ್
79 ದಲಿತರಿಗೆ ಮತ್ತು 17 ಪರಿಶಿಷ್ಠ ಪಂಗಡದ ನಾಯಕರಿಗೂ ಮಮತಾ ಬ್ಯಾನರ್ಜಿ ಟಿಕೆಟ್ ನೀಡಿದ್ದಾರೆ. ಸಮುದಾಯಗಳ ಪ್ರಾಬಲ್ಯದ ಮೇಲೆ ಆ ಕ್ಷೇತ್ರಗಳಲ್ಲಿ ಕ್ರಮಬದ್ಧವಾಗಿ ಟಿಎಂಸಿ ಟಿಕೆಟ್ ಹಂಚಿಕೆ ಮಾಡಿದೆ. ಈ ಎರಡೂ ಸಮುದಾಯಗಳ ಮತಗಳು ಶೇ.30ರಷ್ಟಿವೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನ ಟಿಎಂಸಿ ಕಣಕ್ಕಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ದೊಡ್ಡ ದಂಗೆಕೋರ- ಮಮತಾ ಬ್ಯಾನರ್ಜಿ ವಾಗ್ದಾಳಿ