ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಗೆ ಕೊರೊನಾ ಕಂಟಕ

-ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಧಾರವಾಡ: ನಗರದ ಪೊಲೀಸ್ ತರಬೇತಿ ಶಾಲೆಗೂ ಕೊರೊನಾ ಕಂಟಕ ಆರಂಭವಾಗಿದ್ದು, ನೂರಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿಗೆ ಸೋಂಕು ತಗುಲಿದೆ.

ಧಾರವಾಡ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ತರಬೇತಿ ಶಾಲೆಯಲ್ಲಿ 380 ಜನ ಪ್ರಶಿಕ್ಷಾರ್ಥಿ ಪೊಲೀಸರು ತರಬೇತಿ ಪಡೆಯುತಿದ್ದಾರೆ. ತರಬೇತಿ ಹಂತದಲ್ಲಿರೋ ಭಾವಿ ಪೊಲೀಸರನ್ನೂ ಬಿಡದೆ ಕೊರೊನಾ ಸೋಂಕು ಕಾಡುತ್ತಿದೆ. ಯಾವುದೇ ಪ್ರಶಿಕ್ಷಣಾರ್ಥಿ ಹೊರಗೆ ಬಿಟ್ಟಿರಲಿಲ್ಲ, ಆದರೂ ತರಬೇತಿ ಶಾಲೆಯೊಳಗೆ ಮಹಾಮಾರಿ ಎಂಟ್ರಿ ಕೊಟ್ಟಿದೆ.

- Advertisement -

ಆರಂಭದಲ್ಲಿ ಆರು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆ 380 ಪ್ರಶಿಕ್ಷಣಾರ್ಥಿಗಳನ್ನು ಆಂಟಿಜನ್ ಟೆಸ್ಟ್ ಗೆ ಒಳಪಡಿಸಿದ್ದರು. ಅದರಲ್ಲಿ ನೂರಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು ಇದು ದೊಡ್ಡ ಆತಂಕ ತಂದಿದೆ.

- Advertisement -