Bengaluru CityCrimeKarnatakaLatestMain Post

ಪೊಲೀಸ್ ಠಾಣೆ ಬಳಿಯೇ ರೌಡಿಶೀಟರ್ ಬರ್ಬರ ಹತ್ಯೆ

– ಬೆಂಗಳೂರಿನಲ್ಲಿ ಮುಂದುವರಿದ ಸರಣಿ ರೌಡಿಶೀಟರ್ ಗಳ ಕೊಲೆ

ಬೆಂಗಳೂರು: ನಗರದ ಬಾಣಸವಾಡಿ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ರೌಡಿಶೀಟರ್ ಹರೀಶ್ ನನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳನ್ನು ಕರೆಸಿ ವಾರ್ನ್ ಪೊಲೀಸರು ವಾರ್ನ್ ಮಾಡುತ್ತಿದ್ದಾರೆ. ಇಂದು ಹರೀಶ್ ನನ್ನು ಬಾಣಸವಾಡಿ ಪೊಲೀಸ್ ಠಾಣೆಗೆ ಕರೆಸಿ, ಯಾವುದೇ ರೌಡಿ ಚಟುವಟಿಕೆ ಗಳಲ್ಲಿ ಭಾಗಿಯಾದಂತೆ ವಾರ್ನ್ ಮಾಡಿ ಹೊರ ಕಳುಹಿಸಿದ್ರು. ಇದೇ ಟೈಂ ಗೆ ಕಾದಿದ್ದ ರೌಡಿಗಳ ಗುಂಪೊಂದು, ಕಾರಿನಲ್ಲಿ ಬಂದು ಏಕಾಏಕಿ ಪೊಲೀಸ್ ಠಾಣಾ ಪಕ್ಕದಲ್ಲೇ ಹರೀಶ್ ಅಟ್ಯಾಕ್ ಮಾಡಿದ್ದಾರೆ.

ನೋಡು ನೋಡುತ್ತಲೇ ಹರೀಶ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಸದ್ಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳು ಕಡಿಮೆ ಆಗದೆ ಹೆಚ್ಚಾಗ್ತಿರೋದು ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿದೆ. ಇದನ್ನೂ ಓದಿ: ನೆಲಮಂಗಲದಲ್ಲಿ ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್

ಕೊರೊನಾ ಒಂದು ಹಂತಕ್ಕೆ ಮುಗಿದು ಲಾಕ್‍ಡೌನ್ ತೆರವಾಗಿದ್ದೆ ಬಂತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಬರ್ಬರ ಕೊಲೆಗಳು, ನಟೋರಿಯಸ್ ರೌಡಿಶೀಟರ್ ಗಳ ನಡುವಿನ ಗ್ಯಾಂಗ್ ವಾರ್ ಗಳು ಪೊಲೀಸರ ಕಂಟ್ರೋಲ್ ಗೆ ಸಿಕ್ತಿಲ್ಲ. ಪೊಲೀಸರು ರೌಡಿ ಚಟುವಟಿಕೆಗಳನ್ನು ಕಂಟ್ರೋಲ್ ಮಾಡೋಕೆ ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಆದ್ರೆ ರೌಡಿಗಳು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡ್ತಿಲ್ಲ. ಎಂದಿನಂತೆ ಹಾಡುಹಗಲೇ ಯಾವುದೇ ಭಯವಿಲ್ಲದೇ ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡ್ತಿದ್ದಾರೆ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್‌ಗಳ ಮನೆ ಮೇಲೆ ಸಿಸಿಬಿ ದಾಳಿ

Leave a Reply

Your email address will not be published.

Back to top button