LatestMain PostNational

ಪಾಕಿಸ್ತಾನಕ್ಕೆ ಗುಪ್ತ ಸಂದೇಶ ರವಾನಿಸ್ತಿದ್ದ ಆರ್ಮಿ ಡ್ರೈವರ್ ಅರೆಸ್ಟ್

Advertisements

– ನಕಲಿ ಖಾತೆ ಬಳಸಿ ಪಾಕ್ ಜೊತೆ ಸಂಪರ್ಕ

ಜೈಪುರ: ವೈರಿ ಪಾಕಿಸ್ತಾನಕ್ಕೆ ದೇಶದ ಸೇನೆಯ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರ್ಮಿ ಕಚೇರಿಯ ಚಾಲಕನನ್ನು ರಾಜಸ್ಥಾನದ ಗುಪ್ತಚರ ತಂಡ ಬಂಧಿಸಿದೆ.

29 ವರ್ಷದ ರಾಮ್‍ನಿವಾಸ್ ಬಂಧಿತ ಆರ್ಮಿ ವಾಹನದ ಚಾಲಕ. ಬಂಧಿತ ಚಾಲಕ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದನು. ಅನುಮಾನದ ಮೇಲೆ ಗುಪ್ತಚರ ತಂಡ ರಾಮ್‍ನಿವಾಸ್ ಚಲನವಲನ ಮೇಲೆ ಕಣ್ಣೀಟ್ಟಿತ್ತು. ಸಂಶಯದ ಮೇಲೆ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತರೆದಿದ್ದ ರಾಮ್‍ನಿವಾಸ್ ಪಾಕಿಸ್ತಾನದ ಸೇನೆಯ ಜೊತೆ ಸಂಪರ್ಕ ಹೊಂದಿದ್ದನು. ಭಾರತೀಯ ಸೇನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚಾಲಕ ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದನು. ಆರೋಪಿ ವಿಷಯ ಹಂಚಿಕೆ ಪ್ರತಿಫಲವಾಗಿ ಪಾಕಿಸ್ತಾನ ಸೇನಾಧಿಕಾರಿಗಳಿಗೆ ಹಣ ನೀಡುವಂತೆ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನ ಸಹ ಕಳುಹಿಸಿದ್ದನು ಎಂದು ಉಮೇಶ್ ಮಿಶ್ರಾ ತಿಳಿಸಿದ್ದಾರೆ.

ಬಂಧಿತ ರಾಮ್‍ನಿವಾಸ್ ನಾಗೌರ್ ಜಿಲ್ಲೆಯ ನಿವಾಸಿಯಾಗಿದ್ದು, ಜೈಪುರದ ನಿವಾರೂದಲ್ಲಿರುವ ಸೇನಾ ಕಾರ್ಯಲಯದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಸದ್ಯ ಆರೋಪಿಯನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯಾರಿಗೆ, ಯಾವ ವಿಷಯಗಳನ್ನ ರವಾನಿಸುತ್ತಿದ್ದ ಮತ್ತು ಹಣ ಹೇಗೆ ಈತನ ಖಾತೆಗೆ ಬರುತ್ತಿತ್ತು? ಚಾಲಕನಾಗಿದ್ದರೂ ರಾಮನಿವಾಸ್ ಗೆ ಸೇನೆಯ ರಹಸ್ಯ ಮಾಹಿತಿ ಹೇಗೆ ತಲುಪತ್ತಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published.

Back to top button